Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ದರಿಂಗ್‍ಬಡಿ

ದರಿಂಗ್‍ಬಡಿ, ಕಂಧಮಲ್

4

ದರಿಂಗ್‍ಬಡಿಯು ಕಂಧಮಲ್‍ನ ನೋಡಲೆ ಬೇಕಾದ ಆಕರ್ಷಣೆಗಳಲ್ಲಿ ಪ್ರಥಮ ಆಧ್ಯತೆಯ ಪಟ್ಟಿಯಲ್ಲಿ ನೆಲೆಗೊಂಡಿದೆ. ಇದು ಫುಲ್ಬಾನಿಯಂದ 100 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ದರಿಂಗ್‍ಬಡಿಯು ಸಮುದ್ರ ಮಟ್ಟದಿಂದ 915 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ದರಿಂಗ್‍ಬಡಿಯು ತನ್ನಲ್ಲಿರುವ ಪೈನ್ ಕಾಡುಗಳು, ಕಾಫಿ ತೋಟಗಳು ಮತ್ತು ನಯನ ಮನೋಹರವಾದ ಕಣಿವೆಗಳಿಂದಾಗಿ "ಒರಿಸ್ಸಾದ ಕಾಶ್ಮೀರ್" ಎಂಬ ಕೀರ್ತಿಗೆ ಪಾತ್ರವಾಗಿದೆ. ಬೇಸಿಗೆಯಲ್ಲು ಸಹ ಕಡಿಮೆ ತಾಪಮಾನವನ್ನು ಹೊಂದಿರುವ ಈ ಸ್ಥಳವು ಅನುಪಮವಾದ ಬೇಸಿಗೆ ವಿಹಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು 0° ಸೆಲ್ಶಿಯಸ್‍ಗೆ ಕುಸಿಯುತ್ತದೆ. ಜೊತೆಗೆ ಇಲ್ಲಿನ ಪರಿಸರವು ಹಿಮದಿಂದ ಮುಚ್ಚಿ ಹೋಗುತ್ತದೆ. ದರಿಂಗ್‍ಬಡಿಯು ದಟ್ಟವಾದ ಅರಣ್ಯ ಮತ್ತು ವನ್ಯ ಜೀವಿಗಳಿಂದ ಕೂಡಿದೆ.

ಇಲ್ಲಿ ಹಲವಾರು ಜಲಪಾತಗಳು ನೆಲೆಗೊಂಡಿವೆ. ಅವುಗಳಲ್ಲಿ ಕೆಲವೊಂದು ಇನ್ನು ಸಾರ್ವಜನಿಕರ ಗಮನಕ್ಕೆ ಬಾರದಂತಹವು ತುಂಬಾ ಇವೆ. ಇಲ್ಲಿ ಬೆಟ್ಟದ ಮೇಲೆ ಒಂದು ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ಪ್ರವಾಸಿಗರು ಸುತ್ತಲಿನ ನಯನ ಮನೋಹರವಾದ ದೃಶ್ಯ ವೈಭವವನ್ನು ನೋಡಿ ತಣಿಯಬಹುದು. ದೊಲುರಿ ನದಿಯು ಇಲ್ಲಿನ ಬೆಟ್ಟಗಳ ನಡುವೆ ಹರಿಯುತ್ತದೆ. ಇದರ ಸುಂದರ ನೋಟವು ಅವಿಸ್ಮರಣೀಯವಾಗಿರುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಒಂದು ಅತಿಥಿ ಗೃಹವನ್ನು ಸಹ ನಿರ್ಮಿಸಲಾಗಿದೆ. ಇದರಲ್ಲಿ ಪ್ರವಾಸಿಗರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಮತ್ತು ವನ್ಯ ಜೀವಿಗಳನ್ನು ನೋಡಿ ನಲಿಯುವ ಸಲುವಾಗಿ ವಿಶ್ವದ ನಾನಾ ಮೂಲೆಗಳಿಂದ  ಪ್ರವಾಸಿಗರು ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue