ರೆಕಾಂಗ್ ಪಿಯೋ - ಸಾಮಾನ್ಯವಾಗಿ ಪಿಯೋ ಎಂದು ಕರೆಯಲ್ಪಡುವ ಈ ಸ್ಥಳ ಕಿನ್ನೌರ್ ನ ಜಿಲ್ಲಾ ಕೇಂದ್ರ. ಶಿಮ್ಲಾದಿಂದ 260 ಕಿಲೋ ಮೀಟರ್ ದೂರದಲ್ಲಿ ಈ ನಗರವಿದ್ದು ಸಮುದ್ರಮಟ್ಟದಿಂದ ಸುಮಾರು 2290 ಮೀಟರ್ ಎತ್ತರದಲ್ಲಿದೆ. ಇತಿಹಾಸದ ಪುಟಗಳಲ್ಲಿರುವಂತೆ, ರೆಕಾಂಗ್ ಪಿಯೋ ಮೊದಲು ಕನ್ನೌರ್ರಾ ಅಥವಾ ಕಿನ್ನೌರಾ ಎಂದು ಕರೆಯಲ್ಪಡುತ್ತಿತ್ತು. ಈ ಜಿಲ್ಲೆಯನ್ನು 9 ರಿಂದ 12 ನೇ ಶತಮಾನದ ಮಧ್ಯಭಾಗದಲ್ಲಿ ಟಿಬೇಟಿನ ಗ್ಯೂಗ್ ರಾಜವಂಶಸ್ಥರು ಆಳುತ್ತಿದ್ದರು. ನಂತರ ಇದು ಸಾಥ್ ಕುಂಡ್ ಎಂದು ಕರೆಯಲ್ಪಟ್ಟು ಏಳು ಭಾಗಗಳನ್ನಾಗಿ ವಿಂಗಡಿಸಲಾಯಿತು.
ಈ ಸ್ಥಳದಲ್ಲಿ ನಾಲ್ಕರಲ್ಲಿ ಒಂದು ಬುದ್ದ ಮಹೋತ್ಸವ ಭಾರತದ ಪ್ರಮುಖ ಹಬ್ಬಗಳಲ್ಲೊಂದಾಗಿ ಆಚರಿಸಲ್ಪಡುತ್ತದೆ. ಇದನ್ನು ಆಚರಣೆ ಮಾಡಲ್ಪಡುವುದು ರಾಜ್ಯ ಸರ್ಕಾರದ ಅಧೀನದಲ್ಲಿಯೇ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಕಿನ್ನೌರ್ ಕೈಲಾಸ್ ಪರ್ವತದ ವಿಹಂಗಮ ನೋಟದಿಂದ ಬೆರಗಾಗುತ್ತಾರೆ. ಸಾಹಸಪ್ರಿಯರು ರೆಕಾಂಗ್ ಪಿಯೋದಿಂದ ಕಿನ್ನೌರ್ ಗೆ ಟ್ರೆಕ್ಕಿಂಗ್ ಮಾಡಬಹುದು. ಇದು ಸುಮಾರು 4-5 ದಿನಗಳಷ್ಟು ತೆಗೆದುಕೊಳ್ಳುತ್ತದೆ.


Click it and Unblock the Notifications