ಗಗ್ರೋನ್ ಕೋಟೆಯು ಝಾಲಾವರ್ ನಿಂದ 12 ಕಿ.ಮೀ ದೂರದಲ್ಲಿದೆ. ಕೋಟೆಯನ್ನು 7 ಮತ್ತು 14ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಅಹು ಮತ್ತು ಕಾಳಿ ಸಿಂಗ್ ನದಿಯನ್ನು ಮೂರು ಕಡೆಯಿಂದಲೂ ಸುತ್ತುವರಿದಿದೆ. ನೀರು, ಅರಣ್ಯಗಳಿಂದಲೇ ಈ ಕೋಟೆ ಸುತ್ತುವರಿದಿದೆ. ಕಾಡು ಮತ್ತು ನೀರು ಎರಡೂ ಲಭ್ಯವಿರುವ ಕೆಲವೇ ಕೆಲವು ಕೋಟೆಗಳಲ್ಲಿ ಇದೂ ಒಂದು. ಕೋಟೆಯ ಹೊರಭಾಗದಲ್ಲಿ ಸೂಫಿ ಸಂತ ಮಿತ್ತೆ ಶಾಹ್‌ರ ದರ್ಗಾವನ್ನು ನೋಡಬಹುದು. ಪ್ರತಿವರ್ಷ ಮೊಹರಂ ಸಂದರ್ಭದಲ್ಲಿ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ. ಸಂತ ಪೀಪಾಜಿಯವರು ಸಂತ ಕಬೀರ ಎಂದು ಜನಪ್ರಿಯವಾಗಿದ್ದು, ಇವರ ಸಮಾಧಿಯೂ ಕೂಡಾ ಕೋಟೆಯ ಬಳಿಯಲ್ಲೇ ಇದೆ.


Click it and Unblock the Notifications