ಚಂದ್ರಭಾಗ ದೇವಸ್ಥಾನ ಚಂದ್ರಭಾಗ ನದಿಯ ದಡದಲ್ಲಿದ್ದು, ಝಲಾವರಿನಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. 6 ಮತ್ತು 14ನೇ ಶತಮಾನದ ಮಧ್ಯೆ ಇದನ್ನು ನಿರ್ಮಿಸಲಾಗಿದೆ. ಹಿಂದಿನ ಕಾಲದ ವಾಸ್ತುಶಿಲ್ಪದ ಶೈಲಿಯನ್ನು ಇದು ಸ್ಪಷ್ಟವಾಗಿ ಇನ್ನೂ ಪ್ರತಿಬಿಂಬಿಸುತ್ತಿವೆ. ಸುಂದರವಾದ ಕಂಬಗಳು ಮತ್ತು ಕಮಾನು ಆಕಾರದ ಪ್ರವೇಶದ್ವಾರಗಳು ಹಿಂದಿನ ಕಾಲದ ವಾಸ್ತುಶಿಲ್ಪದ ಐಶ್ವರ್ಯವನ್ನು ಹೇಳುತ್ತಿದೆ. ನದಿಯ ದಡದಲ್ಲಿ ಹಲವು ದೇವಸ್ಥಾನಗಳಿವೆ. ಆದರೆ ಇಲ್ಲಿನ ಜನಪ್ರಿಯ ದೇವಸ್ಥಾನವೆಂದರೆ ಶ್ರೀ ದ್ವಾರಕೀಶ ದೇವಸ್ಥಾನ, ಶಾಂತಿನಾಥ ಜೈನ ದೇವಸ್ಥಾನ ಮತ್ತು ಪದ್ಮನಾಭ ದೇವಸ್ಥಾನಗಳು.


Click it and Unblock the Notifications