ಬೌದ್ಧ ಗುಹೆಗಳು ಮತ್ತು ಸ್ತೂಪಗಳು ಝಾಲಾವರ್ ದ ಪ್ರಮುಖ ಆಕರ್ಷಣೆಗಳು. ಇವು ಕಲ್ಲನ್ನೇ ಕೆತ್ತಿ ಮಾಡಲಾದ ಗುಹೆಗಳಾಗಿವೆ. ಕೋಲ್ವಿ ಹಳ್ಳಿಯಲ್ಲಿ ಈ ಗುಹೆಗಳು ಉತ್ಖನನದಿಂದಾಗಿ ಹೊರಜಗತ್ತಿಗೆ ತೆರೆದುಕೊಂಡಿವೆ. ಸದ್ಯ ಇದು ವಾಸ್ತುಶಿಲ್ಪ ಶಾಸ್ತ್ರದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಂಡಿದೆ. ಈ ಹಳ್ಳಿಯು ಝಾಲಾವರ್ ನಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಬುದ್ಧನ ಆನೆ ಗಾತ್ರದ ಮೂರ್ತಿ ಮತ್ತು ಸುಂದರವಾದ ಸ್ತೂಪಗಳ ಕೆತ್ತನೆ ಹಾಗೂ ಸ್ತೂಪಗಳ ಕಲಾಕೃತಿಯು ಪ್ರವಾಸಿಗರನ್ನು ಮೋಡಿಮಾಡುತ್ತವೆ. ಶತಮಾನಗಳ ಹಿಂದೆ ಪ್ರಮುಖ ನಾಗರಿಕತೆಯಾಗಿದ್ದ ಕುರುಹನ್ನು ಕೋಲ್ವಿ ಮತ್ತು ಸುತ್ತಮುತ್ತಲಿನ ಹಳ್ಳಿಗಳು ಇಂದಿಗೂ ನೀಡುತ್ತವೆ. ಈ ಪ್ರದೇಶದಲ್ಲಿ ಬೌದ್ಧ ತತ್ವದ ಸ್ಪಷ್ಟ ಸಂಕೇತಗಳನ್ನು ಇಲ್ಲಿ ಯಾರು ಬೇಕಾದರೂ ಗುರುತಿಸಬಹುದು.


Click it and Unblock the Notifications