ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಫ್ರಾನ್ಸ್ ನಲ್ಲಿದ್ದ ಎರಡು ಸೊಲಾರರಿಯಂ ಗಳ ನಾಶದ ನಂತರ ಇದು ಇಂದು ವಿಶ್ವದಲ್ಲಿರುವ ಏಕ ಮಾತ್ರ ಸೊಲಾರಿಯಂ ಆಗಿದೆ. ಇದು ಸೂರ್ಯನ ಬೆಳಕನ್ನು ಸರಿಯಾಗಿ ಅನುಭವಿಸಲು ಕಟ್ಟಿರುವ ರಚನೆಯಾಗಿದೆ. ಸೊಲಾರಿಯಂ ಒಂದು ತಿರುಗುವ ಮನೆಯಾಗಿದೆ. ಇದು ದಿನವಿಡಿ ತಿರುತ್ತಾ ಇದ್ದು ಚರ್ಮ ರೋಗ, ಕ್ಷಯ ಮತ್ತು ಸಂಧಿವಾತದಿಂದ ಬಳಲುತ್ತಿರುವವರಿಗೆ ಬಹಳ ಉಪಯೋಗಕಾರಿಯಾಗಿದೆ. ಆದರೂ ಈ ಬಿಸಿಲ ಮನೆಯನ್ನು ಸರಿಯಾಗಿ ನಡೆಸಬಲ್ಲ ವೈದ್ಯ 1996 ರಲ್ಲಿ ಅಸುನೀಗಿದರು ಹಾಗಾಗಿ ಇಂದು ಜಾಮ್ ನಗರಲ್ಲಿರುವ ಈ ಬಿಸಿಲ ಮನೆ ಅಥವಾ ರಂಜಿತ್ ಇನ್ಸ್ಟಿಟ್ಯೂಟ್ ಆಫ್ ಪೋಲಿ ರೇಡಿಯೋ ಥೆರಪಿ ಮುಚ್ಚಲ್ಪಟ್ಟಿದೆ.


Click it and Unblock the Notifications