ದೇಶದ ಐದು ಅತಿ ದೊಡ್ಡ ಖಗೋಳ ವೀಕ್ಷಣಾಲಯಗಳಲ್ಲಿ ಜಂತರ್ ಮಂತರ್ ಕೂಡಾ ಒಂದು. ಇದನ್ನು ಸಂಸ್ಥಾಪಿಸಿದ್ದು ರಾಜ ಎರಡನೇ ಸವಾಯಿ ಜೈ ಸಿಂಗ್. ಇದನ್ನು ಯುನೆಸ್ಕೋದ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ವೀಕ್ಷಣಾಲಯಕ್ಕೆ ಉತ್ತಮ ಗುಣಮಟ್ಟದ ಮಾರ್ಬಲ್ ಮತ್ತು ಕಲ್ಲುಗಳನ್ನು ಬಳಸಲಾಗಿದೆ. ರಾಮ ಯಂತ್ರ (ಅಥವಾ ಅಕ್ಷಾಂಶಗಳನ್ನು ಗುರುತಿಸಲು ಬಳಸುವ ಸಾಧನ) ಇಲ್ಲಿದೆ.
ಇದು ಮಹಾರಾಜನಿಗೆ ಖಗೋಳದ ಬಗ್ಗೆ ಇದ್ದ ಆಸಕ್ತಿ ಮತ್ತು ನಿಪುಣತೆಯನ್ನು ತೋರಿಸುತ್ತದೆ. ಇತರ ಪ್ರಮುಖ ಸಲಕರಣೆಗಳೆಂದರೆ, ಧ್ರುವ, ದಕ್ಷಿಣ, ನರಿವಲ್ಯ, ರಾಶಿವಲ್ಯಗಳು, ಸಣ್ಣ ಸಾಮ್ರಾಟ್, ದೊಡ್ಡ ಸಾಮ್ರಾಟ್, ವೀಕ್ಷಕರ ಸ್ಥಾನ, ದಿಶಾ, ಸಣ್ಣ ರಾಮ್, ದೊಡ್ಡ ರಾಮ ಯಂತ್ರ, ಸಣ್ಣ ಕ್ರಾಂತಿ, ದೊಡ್ಡ ಕ್ರಾಂತಿ, ರಾಜ್, ಉನ್ನಥಂಸ, ಜೈ ಪ್ರಕಾಶ ಮತ್ತು ದಿಗಂತಗಳು.