ಜೈಪುರದ ರಾಜ ಎರಡನೇ ಜೈ ಸಿಂಗ್ ಈ ಚಂದ್ರ ಮಹಲ್‌ನ್ನು ನಿರ್ಮಿಸಿದ. ಇದು ಸಿಟಿ ಪ್ಯಾಲೇಸಿನಲ್ಲಿದೆ. ಈ ಮಹಲ್ ಅರಮನೆಯ ಏಳನೇ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ. ಸದ್ಯ ಇದು ಜೈಪುರದ ಮಹಾರಾಜನ ಅರಮನೆಯಾಗಿದೆ. ಈ ಪ್ರದೇಶವು ಗಾಜು ಗೋಡೆಗಳು, ಮ್ಯೂರಲ್ ಪೇಂಟಿಂಗ್ ಮತ್ತಿತರ ಸೂಕ್ಷ್ಮ ಕಲಾಕೃತಿಗಳಿಗೆ ತವರಾಗಿದೆ. ಇಲ್ಲಿ ಏಳು ಅಂತಸ್ತಿನ ಗೃಹವಿದೆ. ಮೊದಲ ಎರಡು ಮಳಿಗೆಯು ಸುಖ ನಿವಾಸ್ ಹಾಲ್ ಭಾಗಗಳು. ಇದರ ಜೊತೆಗೆ ಇಲ್ಲೊಂದು ರಂಗ ಮಂದಿರ ಮತ್ತು ಶೋಭಾ ನಿವಾಸ ಮತ್ತು ಚಾವಿ ನಿವಾಸ ಅಥವಾ ಗಾಜಿನ ಮನೆಯಿದೆ.


Click it and Unblock the Notifications