ಲೇಡಿ ಆಫ್ ಗುಡ್ ಹೆಲ್ತ್ ಶ್ರೈನ್ ಜೊವಾಯಿ ಹೈವೇಯಿಂದ 32 ಕಿ.ಮೀ. ದೂರದಲ್ಲಿ ರೈಲಂಗ್ ಗ್ರಾಮದಲ್ಲಿದೆ. ದೇವಾಲಯವು ಅಷ್ಟಭುಜ ಆಕಾರದಲ್ಲಿ ಮೂರು ಮಹಡಿಗಳನ್ನು ಹೊಂದಿದೆ. ಅಮೃತಶಿಲೆಯಲ್ಲಿ ಕೆತ್ತಲಾಗಿರುವ ಲೇಡಿ ಆಫ್ ಗುಡ್ ಹೆಲ್ತ್ ಪ್ರತಿಮೆಯು ಗೋಳದ ಮೇಲೆ ಸ್ಥಾಪಿತವಾಗಿದ್ದು, ತುಂಬಾ ದೂರದಿಂದ ಕೂಡ ಇದನ್ನು ಕಾಣಬಹುದಾಗಿದೆ. ದೇವಾಲಯದಲ್ಲಿರುವ ಏಕೈಕ ದೊಡ್ಡ ಹಾಲ್ ನ ಮಧ್ಯಭಾಗದಲ್ಲಿ ಬಲಿಪೀಠವಿದೆ.
ಇದರ ಮೂಲ ದೇಗುಲ ತಮಿಳುನಾಡಿನ ವೆಲಂಕಣಿಯಲ್ಲಿದೆ. ಅಲ್ಲಿ ಕನ್ಯೆ ಮೇರಿಯ ಮೂರ್ತಿಯಿದೆ. ದಂತಕಥೆಗಳ ಪ್ರಕಾರ ಇಂದು ಬೆಸಿಲಿಕಾವಿರುವ ಪ್ರದೇಶದಲ್ಲಿ ಮಜ್ಜಿಗೆ ಮಾರುವ ಹುಡುಗನಿಗೆ ಮಗು ಜೀಸಸ್ ನ್ನು ಹಿಡಿದ ಕನ್ಯೆ ಮೇರಿಯ ರೂಪವು ಕಂಡುಬಂದಿತ್ತಂತೆ. ಜೊವಾಯಿಯಲ್ಲಿರುವ ಲೇಡಿ ಆಫ್ ಹೆಲ್ತ್ ಶ್ರೈನ್ ಕೂಡ ಇದೇ ಪವಾಡದ ಕಥೆಯ ನಂಬಿಕೆಯನ್ನು ಹೊಂದಿದೆ. ಶಿಲ್ಲಾಂಗ್ ನಿಂದ ಪ್ರವಾಸಿ ಕಾರನ್ನು ಪಡೆದು ಸುಲಭವಾಗಿ ಇಲ್ಲಿಗೆ ತಲುಪಬಹುದು.


Click it and Unblock the Notifications