ಬೊರ್ಘಾಟ್ ಮಂದಿರ ಜೈನ್ತಿಯಾ ಹಿಲ್ಸ್ ನ ಬೊರ್ಘಾಟ್ ಗ್ರಾಮದಲ್ಲಿದೆ ಮತ್ತು ಬಾಂಗ್ಲಾದೇಶ ಗಡಿಗೆ ಹತ್ತಿರದಲ್ಲೇ ಇದೆ. 1880ರ ತನಕ ಇದು ಪೂರ್ಣ ಸ್ಥಿತಿಯಲ್ಲಿತ್ತು. ಆದರೆ 1897ರಲ್ಲಿ ಭೂಕಂಪದಿಂದ ಇದರ ಅಡಿಪಾಯವನ್ನೇ ಅಲ್ಲುಗಾಡಿಸಿದ ಬಳಿಕ ಇದು ಶಿಥಿಲಾವಸ್ಥೆಗೆ ತಲುಪಿದೆ. ಇದ್ಯಾವುದು ಯಾತ್ರಾರ್ಥಿಗಳನ್ನು ಇಲ್ಲಿಗೆ ಭೇಟಿ ನೀಡುವುದರಿಂದ ತಡೆದಿಲ್ಲ. ವಾಸ್ತವವೆಂದರೆ ಇದರ ಪಾಳುಬಿದ್ದ ಸೌಂದರ್ಯ ಒಂದು ನಿಗೂಢ ಸೆಳೆತವನ್ನು ಉಂಟು ಮಾಡಿದೆ.
ಶಿವನಿಗಾಗಿ ಇರುವ ಹಿಂದೂ ಮಂದಿರವನ್ನು ಸುಟ್ಟ ಇಟ್ಟಿಗೆಗಳಿಂದ ಕಟ್ಟಲಾಗಿದೆ. 70 ಮೀಟರ್ ಉದ್ದ ಮತ್ತು ಅಗಲವಿರುವ 100 ಮೀಟರ್ ನ ಸಾಧಾರಣ ಇಟ್ಟಿಗೆಯ ಗೋಡೆ ಇದನ್ನು ಸುತ್ತುವರಿದಿದೆ. ಹಿಂದಿನ ಕಾಲದಲ್ಲಿ ಜೈನ್ತಿಯಾದ ರಾಜರು ಇಲ್ಲಿ ಪ್ರಾಣಿ ಬಲಿ ಕೊಡುತ್ತಿದ್ದರು. ಅದಾಗ್ಯೂ ಈ ಪದ್ಧತಿ ಈಗ ಚಾಲ್ತಿಯಲ್ಲಿಲ್ಲ. ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಸಣ್ಣ ಪೂಜೆಗಳನ್ನು ಮಾಡಿಸುತ್ತಾರೆ.
ಮಂದಿರಕ್ಕೆ ಪ್ರಯಾಣಿಸಲು ಅತ್ಯಂತ ಸುಲಭ ಮಾರ್ಗವೆಂದರೆ ಕಾರನ್ನು ಬಾಡಿಗೆ ಪಡೆದ ಲಾಡ್ ರಯಂಬೈ-ಬಟವ-ಬೊರ್ಘಾಟ್ ರಸ್ತೆ ಮೂಲಕ ಸಾಗಬೇಕು.


Click it and Unblock the Notifications