ಮಣಿಪುರ ರಾಜ್ಯ ವಸ್ತು ಸಂಗ್ರಹಾಲಯವನ್ನು ಮಣಿಪುರದ ಸಮೃದ್ಧ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಲು ಸ್ಥಾಪಿಸಲಾಗಿದೆ. 1969ರಲ್ಲಿ ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಉದ್ಘಾಟಿಸಿದ್ದರು. ಮಣಿಪುರ ರಾಜ್ಯ ವಸ್ತು ಸಂಗಹಾಲಯ ಪುರಾತತ್ತ್ವ ಶಾಸ್ತ್ರ, ಎತ್ನಾಲಜಿ, ನೈಸರ್ಗಿಕ ಇತಿಹಾಸ, ಮತ್ತು ಚಿತ್ರಕಲೆಯ ಮಾಹಿತಿಯನ್ನು ನೀಡುವ ಒಂದು ಉಗ್ರಾಣವಾಗಿದೆ.
ಕಾಂಗ್ಲಾದ ಪೋಲೊ ಮೈದಾನಕ್ಕೆ ಹತ್ತಿರದಲ್ಲಿದ್ದು, ಪ್ರವಾಸಿಗರು ಸುಲಭವಾಗಿ ಒಂದೇ ದಿನದಲ್ಲಿ ಎಲ್ಲಾ ಈ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಬಹುದು. ವಸ್ತುಸಂಗ್ರಹಾಲಯದಲ್ಲಿ ಪ್ರಮುಖ ಕಲಾಕೃತಿಗಳಲ್ಲಿ 78 ಅಡಿ ಉದ್ದದ ಒಂದು ಹಿಯಾಂಗ್ ಹಿರೇನ್(ರಾಯಲ್ ದೋಣಿ), ದೋಣಿಯನ್ನು ಮುಕ್ತ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತದೆ. ವಸ್ತು ಸಂಗ್ರಹಾಲಯ ಅನೇಕ ಕಲಾಶಾಲೆಗಳನ್ನು ಹೊಂದಿದ್ದು, ಪ್ರತಿಯೊಂದೂ ವಿವಿಧ ವಿಷಯಗಳ ಮೇಲೆ ಮಾಹಿತಿಯನ್ನು ನೀಡುತ್ತವೆ.
ಮಣಿಪುರ ರಾಜ್ಯ ವಸ್ತು ಸಂಸ್ಕೃತಿ, ಜೀವಶಾಸ್ತ್ರ ಮತ್ತು ವಸ್ತುಸಂಗ್ರಹಾಲಯ ಅರಿವುಗಳ ಮೇಲೆ ನಿಯಮಿತವಾಗಿ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಚಾಲಿತ ಪ್ರದರ್ಶನಗಳು ಮತ್ತು ವಿಜ್ಞಾನ ಮೇಳಗಳು ಸಹ ರಾಜ್ಯ ವಸ್ತು ಸಂಗ್ರಹಾಲಯದ ಮೂಲಕ ಆಯೋಜಿಸಲಾಗುತ್ತದೆ.ಈ ವಸ್ತು ಸಂಗ್ರಹಾಲಯ ಸೋಮವಾರದಿಂದ ಶನಿವಾರದವರೆಗೆ (ರಜಾದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 10 ರಿಂದ ಸಾಯಂಕಾಲ 4:30ರವರೆಗೆ ತೆರೆಯಲ್ಪಡುತ್ತದೆ.