ತೊಡುಪುಳದಿಂದ 25 ಕಿ.ಮೀ ಗಳ ದೂರದಲ್ಲಿ ಕಿಳಾರ್ಕುತು ಎಂಬ ಜಲಪಾತವಿದೆ. ಈ ಮೇಸ್ಮರೈಸಿಂಗ್ ಜಲಪಾತವು 'ಕಾಮನ ಬಿಲ್ಲು ಜಲಪಾತ' ವೆಂಬ ಇನ್ನೊಂದು ಹೆಸರಿನಿಂದಲೂ ಪ್ರಖ್ಯಾತವಾಗಿದೆ. ಇದು 1500 ಮೀಟರ್ ಎತ್ತರದಿಂದ ಧುಮುಕುತ್ತದೆ. ಕಲ್ಲಿನಿಂದಲೇ ಉದ್ಭವಗೊಂಡಂತೆ ಕಾಣುತ್ತದಾದ್ದರಿಂದ ಮನಸು ರೋಮಾಂಚನಗೊಳ್ಳುತ್ತದೆ. ವರ್ಷವಿಡೀ ರಭಸದಿಂದ ಕೂಡಿದ್ದು, ಇದರ ಸುತ್ತಮುತ್ತ ಇರುವ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಔಷಧೀಯ ಗುಣಗಳಿರುವ ಮರ ಗಿಡಗಳಿವೆ. ನೀವು ಸಾಹಸ ಪ್ರಿಯರಾದರೆ ಖಂಡಿತ ಇಲ್ಲಿಗೆ ಬರಲೇಬೇಕು!


Click it and Unblock the Notifications