ಮಾಳಂಕಾರ ಜಲಾಶಯ ಕೃತಕ ಸರೋವರವನ್ನು ಸೃಷ್ಠಿಸಿದೆ. 11 ಕಿಲೋಮೀಟರ್ ನಷ್ಟು ವಿಶಾಲವಾಗಿ ಹಬ್ಬಿರುವ ಈ ಸರೋವರ ಮನಮೋಹಕವಾಗಿದೆ. ಪ್ರಕೃತಿಯ ನಡುವೆ ಒಂದಿಡೀ ದಿನ ಕಳೆಯುವ ಆಲೋಚನೆ ನಿಮಗಿದ್ದರೆ ಖಂಡಿತವಾಗಿಯೂ ನೀವಿಲ್ಲಿಗೆ ಬರಬಹುದು. ದೋಣಿ ವಿಹಾರ, ಮೀನುಗಾರಿಕೆಯ ಮೋಜನ್ನು ಇಲ್ಲಿ ಸವಿಯಬಹುದು. ತೋಡಪುಜಾ ಪಟ್ಟಣದಿಂದ ಕೇವಲ 6 ಕಿಲೋಮೀಟರ್ ಅಂತರದಲ್ಲಿ ಈ ಜಲಾಶಯವಿದೆ. ಮಾಳಂಕಾರ ಜಲಾಶಯದಲ್ಲಿ ದೋಣಿವಿಹಾರಕ್ಕೆಂದೇ ಪ್ರತೀ ವರ್ಷ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ.