ಇಡುಕ್ಕಿ ಕಮಾನು ಅಣೆಕಟ್ಟು, ಇಡುಕ್ಕಿ

ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ಇಡುಕ್ಕಿ ಕಮಾನು ಅಣೆಕಟ್ಟು

ದೇಶ ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಸೂಜಿಗಲ್ಲು ಇಡುಕ್ಕಿ ಬಳಿ ಇರುವ  ಕಮಾನು ಅಣೆಕಟ್ಟು. ವಿಶ್ವದ ಎರಡನೇ ಕಮಾನು ಆಕಾರದ ಆಣೆಕಟ್ಟು ಇದಾಗಿದೆ ಎಂಬುದು ಈ ಸೆಳೆತಕ್ಕೆ ಇರುವ ಮುಖ್ಯ ಕಾರಣ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸುಂದರ ಆಣೆಕಟ್ಟನ್ನು ಪರಿಯಾರ್‌ ನದಿಗೆ ಕುರುವಣ್ ಮಲೆ ಹಾಗೂ ಕುರಾಥಿಮಲೆ ಬೆಟ್ಟಗಳ ನಡುವೆ ನಿರ್ಮಿಸಲಾಗಿದೆ. ಇದರ ಎತ್ತರ 550 ಅಡಿ. 650 ಅಡಿ ಅಗಲವಾಗಿದೆ. ಐದು ಉಪನದಿಗಳು ಹಾಗೂ , ಇತರ 20 ಆಣೆಕಟ್ಟುಗಳಲ್ಲಿ ಸಂಗ್ರಹವಾದ ನೀರು ಇಲ್ಲಿಗೆ ಸುರಂಗದ ಮೂಲಕ ಹರಿದು ಬರುತ್ತದೆ. ಭೂಗರ್ಭದೊಳಗೆ ನಿರ್ಮಿಸಲಾಗಿರುವ ವಿದ್ಯುತ್‌ ಜನರೇಟರ್‌ನಲ್ಲಿ ವಿದ್ಯುತ್‌  ಉತ್ಪಾದಿಸಲಾಗುತ್ತದೆ. ಛೆರುಥೋನಿ ಹಾಗೂ ಇಡುಕ್ಕಿ ವನ್ಯಮೃಗಧಾಮಗಳು ಇಲ್ಲೇ ಸಮೀಪದಲ್ಲೇ ಇವೆ. ಈ ಸ್ಥಳಕ್ಕೆ ಆಗಸ್ಟ್ ನಿಂದ ಮಾರ್ಚ್ ತಿಂಗಳಿನವರೆಗೂ ಭೇಟಿ ನೀಡಬಹುದು.

Please Wait while comments are loading...