Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ನಿಜಾಮರ ವಸ್ತು ಸಂಗ್ರಹಾಲಯ

ನಿಜಾಮರ ವಸ್ತು ಸಂಗ್ರಹಾಲಯ, ಹೈದರಾಬಾದ್

1

ನಿಜಾಮ್ ವಸ್ತು ಸಂಗ್ರಹಾಲಯವು ಐತಿಹಾಸಿಕ ನಗರವಾದ ಹೈದರಬಾದಿಗೆ ಭೇಟಿಕೊಡುವ ಪ್ರತಿಯೊಬ್ಬ ಪ್ರವಾಸಿಗರಿಗು ಮಾರ್ಗದರ್ಶಕವಾಗಿ ನಿಂತಿದೆ. ಈ ವಸ್ತು ಸಂಗ್ರಹಾಲಯವು ನಿಜಾಮರ ಅರಮನೆಯ ಒಂದು ಭಾಗವಾಗಿದೆ. ಇದು ಗತಕಾಲದ ಹಲವಾರು ಐತಿಹಾಸಿಕ ವರ್ಣಚಿತ್ರಗಳನ್ನು, ಆಭರಣಗಳನ್ನು, ಉಡುಗೊರೆಗಳನ್ನು, ಆಯುಧಗಳನ್ನು ಪ್ರದರ್ಶಿಸುವ ಸಲುವಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ವಸ್ತುಗಳಲ್ಲಿ ಪ್ರಮುಖವಾಗಿ ಉಡುಗೊರೆಗಳು ಮತ್ತು ಸ್ಮರಣಿಕೆಗಳು ಸೇರಿವೆ. ಇವೆಲ್ಲವು ನಿಜಾಮರಿಗೆ ನೀಡಲ್ಪಟ್ಟವುಗಳಾಗಿದ್ದು, ಹಲವಾರು ವರ್ಷಗಳಿಂದ ಅವುಗಳನ್ನು ಸಂಗ್ರಹಿಸಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಭೇಟಿ ನೀಡುವವರು ಹೈದರಬಾದ್‍ನ ಪ್ರಮುಖ ಸ್ಥಳ ಮತ್ತು ಕಟ್ಟಡಗಳ ಬೆಳ್ಳಿ ಮಾದರಿಗಳನ್ನು ಪ್ರದರ್ಶನದ ಸಲುವಾಗಿ ನಿರ್ಮಿಸಿ ಇಡಲಾಗಿದೆ.

ಇಲ್ಲಿ ಪ್ರದರ್ಶನಕ್ಕೆ ಇಡಲಾಗಿರುವ ವಸ್ತುಗಳಲ್ಲಿ ಮರ ಮತ್ತು ಚಿನ್ನವನ್ನು ಬಳಸಿ ಮಾಡಲಾಗಿರುವ ಸಿಂಹಾಸನ,  ಬೆಳ್ಳಿಯ ಸರಿಸಾಟಿಯಿಲ್ಲದ ಕೆತ್ತನೆಗಳಿಂದ ಕೂಡಿದ ಸುಗಂಧ ದ್ರವ್ಯದ ಬಾಟಲಿಗಳು, ಬೆಳ್ಳಿಯಿಂದ ಮಾಡಲಾದ ವಜ್ರದ ಮುಚ್ಚಳಗಳನ್ನು ಹೊಂದಿರುವ ಕಾಫಿ ಕಪ್‍ಗಳು, ಮುತ್ತುಗಳಲ್ಲಿಯೆ ಅತ್ಯುತ್ತಮವಾದುದೆಂದು ಬಣ್ಣಿಸಲಾದ ಮುತ್ತನ್ನು ಹೊಂದಿರುವ ಮರದ ಬರವಣಿಗೆಯ ಡಬ್ಬಗಳು ಸೇರಿವೆ. ಅಲ್ಲದೆ ಆಭರಣಗಳ ಪೆಟ್ಟಿಗೆ, ಚಿನ್ನದ ಮತ್ತು ವಜ್ರದಿಂದ ಅಲಂಕೃತಗೊಂಡ ಊಟದ ಡಬ್ಬಿ ಮತ್ತು ಬೆಳ್ಳಿಯ ಎಳೆಗಳಿಂದ ಮಾಡಿದ ಆನೆ ಹಾಗು ಮಾವುತರ ಚಿತ್ರವು ಎಂತಹವರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಇದರೊಂದಿಗೆ ವಿಂಟೇಜ್ ಕಾರು ಪ್ರಿಯರಿಗಾಗಿ ರೋಲ್ಸ್ ರಾಯ್ಸ್ ಹಾಗು ಜಾಗ್ವರ್ ಮಾರ್ಕ್ V ಕಾರುಗಳನ್ನು ಸಹ ಇಲ್ಲಿನ ಪ್ರದರ್ಶನದಲ್ಲಿ ಇಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu