Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಮೃಗವಾಣಿ ರಾಷ್ಟ್ರೀಯ ಉದ್ಯಾನವನ

ಮೃಗವಾಣಿ ರಾಷ್ಟ್ರೀಯ ಉದ್ಯಾನವನ, ಹೈದರಾಬಾದ್

2

ಮೃಗವಾಣಿ ರಾಷ್ಟ್ರೀಯ ಉದ್ಯಾನವನವು ಹೈದರಬಾದಿನಿಂದ 25 ಕಿ.ಮೀ ದೂರದಲ್ಲಿರುವ ಚಿಲ್ಕೂರ್ ನಲ್ಲಿ ನೆಲೆಗೊಂಡಿದೆ. ಇಲ್ಲಿರುವ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. ಈ ಉದ್ಯಾನವನದಲ್ಲಿ ಹತ್ತಿರ ಹತ್ತಿರ 600 ಸಸ್ಯ ಪ್ರಬೇಧಗಳನ್ನು ಕಾಣಬಹುದು. ಇಲ್ಲಿ ಬಿದಿರು, ಪಲಸ್, ಗಂಧದ ಮರ, ತೇಗ, ಪೈಕಸ್ ಮತ್ತು ರೆಲ ಮರಗಳು ಬೆಳೆದಿರುವುದನ್ನು ಕಾಣಬಹುದು. ಇದರೊಂದಿಗೆ ಚಿರತೆಯಿಂದ ಪುನುಗು ಬೆಕ್ಕಿನವರೆಗು ಹಾಗು ಕಾಡುಬೆಕ್ಕಿನಿಂದ ಕಾಡು ಹಂದಿಯ, ಸಾಂಬರ್ ವರೆಗಿನ ಪ್ರಾಣಿಗಳ ಶ್ರೇಣಿಗಳನ್ನು ಕಣ್ತುಂಬಿಕೊಳ್ಳಬಹುದು.

ಅಷ್ಟೇ ಅಲ್ಲದೆ ಮಂಡಲ ಹಾವು ,ನಾಗರಹಾವು , ಹೆಬ್ಬಾವುಗಳ ಜೊತೆಗೆ ಭಾರತೀಯ ಕೇರೆ ಹಾವನ್ನು ಸಹ ಈ ಉದ್ಯಾನವನದಲ್ಲಿ ಕಾಣಬಹುದು. ಹೂವುಗಳ ಮಧುವನ್ನು ಹೀರುವ ಪಕ್ಷಿಗಳನ್ನು ಈ ಉದ್ಯಾನವನದಲ್ಲಿ ಸಾಮಾನ್ಯವಾಗಿ  ಕಾಣಬಹುದು. ಯಾರು ಬೇಕಾದರರು ಈ ಉದ್ಯಾನವನಕ್ಕೆ ಹಗಲಿನ ಹೊತ್ತಿನಲ್ಲಿ ಭೇಟಿಕೊಡಬಹುದು. ಧೈರ್ಯವಿದ್ದವರು ಉದ್ಯಾನವನದ ಒಳಗಡೆ ಲಭ್ಯವಿರುವ ಕಾಟೇಜ್‍ಗಳಲ್ಲಿ ರಾತ್ರಿಯನ್ನು ಕಳೆಯುತ್ತ, ಕಾಡಿನ ವನ್ಯಜೀವಿಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat