ಮೀರ್ ಅಲಂ ಕೆರೆಯು ಹೈದರಬಾದ್ - ಬೆಂಗಳೂರು ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಇದು ನೆಹರು ಮೃಗಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಮೀರ್ ಅಲಂ ಕೆರೆಯು ಹಿಮಯತ್ ಕೆರೆ ಮತ್ತು ಹುಸೇನ್ ಸಾಗರ್ ಕೆರೆಗಳನ್ನು ಕಟ್ಟುವ ಮೊದಲು ಹೈದರಬಾದಿನ ವಾಸಿಗಳಿಗೆ ಕುಡಿಯುವ ಮತ್ತು ಅಡುಗೆಗೆ ಅವಶ್ಯಕವಾಗಿರುವ ನೀರನ್ನು ಪೂರೈಸುತ್ತಿತ್ತು. ಈ ಕೆರೆಯು 1804ರಲ್ಲಿ ಮೀರ್ ಅಲಾಂ ಬಹದ್ದೂರ್ ರವರಿಂದ ನಿರ್ಮಿಸಲ್ಪಟ್ಟಿತು. ಇವರು ಹೈದರಬಾದಿನ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಹೈದರಬಾದಿನ ಮೂರನೆ ನಿಜಾಮನಾದ ಮೀರ್ ಅಕ್ಬರ್ ಅಲಿಖಾನ್ ಸಿಕಂದರ ಜಹ್ ಅಸಿಫ್ ಜಹ್‍ನು ತನ್ನ ಆಳ್ವಿಕೆಯಡಿಯಲ್ಲಿ ಈ ಕೆರೆಯ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟನು.
ಇದನ್ನು ನಿರ್ಮಿಸಲು ಎರಡು ವರ್ಷಗಳ ಕಾಲ ಹಿಡಿಯಿತು. ಈ ಕೆರೆಯ ಹಿಂದೆ ಒಂದು ಕುತೂಹಲಕಾರಿಯಾದ ಕಥೆಯಿದೆ. ಮೀರ್ ಅಲಂನು ಟಿಪ್ಪು ಸುಲ್ತಾನನ ಮೇಲೆ ನಡೆದ ಯುದ್ಧದಲ್ಲಿ ನಿಜಾಮನ ಸೈನ್ಯವನ್ನು ಮುನ್ನಡೆಸಿದ್ದನು. ನಂಬಿಕೆಗಳ ಪ್ರಕಾರ ಈ ಕೆರೆಯನ್ನು ಟಿಪ್ಪುವಿನ ಸೋಲಿನ ಬಳಿಕ ಶ್ರೀರಂಗಪಟ್ಟಣದಲ್ಲಿ ಕೊಳ್ಳೆ ಹೊಡೆದ ಸಂಪತ್ತಿನಿಂದ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.


Click it and Unblock the Notifications