ದುರ್ಗಂ ಚೆರುವು ಎಂಬುದು ಹೈದಾರಬಾದಿನ ರಂಗಾರೆಡ್ದಿ ಜಿಲ್ಲೆಯಲ್ಲಿ ಇರುವ ಒಂದು ತಿಳಿ ನೀರಿನ ಕೆರೆಯಾಗಿದೆ. ಈ ಕೆರೆಯನ್ನು ಒಂದು ರಹಸ್ಯ ಕೆರೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಜುಬಿಲಿ ಹಿಲ್ಸ್ ಮತ್ತು ಮಾಧಾಪುರ್ ಪ್ರದೇಶಗಳ ನಡುವೆ ಯಾರಿಗು ಕಾಣದಂತೆ ನೆಲೆಗೊಂಡಿದೆ. ಈ ಕೆರೆಯನ್ನು ಹೈದರಬಾದಿನ ಜನತೆ ಐತಿಹಾಸಿಕವಾಗಿ ಮಹತ್ವವನ್ನು ಪಡೆದಿರುವ ಕೆರೆಯಾಗಿ ಪರಿಗಣಿಸಿದ್ದಾರೆ. ಏಕೆಂದರೆ ಇದು ಖುತುಬ್ ಷಾಹಿ ಸಾಮ್ರಾಜ್ಯದ ಅವಧಿಯಲ್ಲಿ ಗೋಲ್ಕೊಂಡ ಕೋಟೆ ಹಾಗು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಕುಡಿಯುವ ನೀರನ್ನು ಪೂರೈಸುವ ಮೂಲವಾಗಿ ಬಳಕೆಯಾಗುತ್ತಿತ್ತು. ಇದರ ಜೊತೆಗೆ ರೈತರು ಸಹ ನೀರಾವರಿ ಉದ್ದೇಶಕ್ಕೆ ಈ ಕೆರೆಯ ನೀರನ್ನು ಬಳಸಿಕೊಳ್ಳುತ್ತಿದ್ದರು.
2001ರಲ್ಲಿ ರಾಜ್ಯ ಸರ್ಕಾರವು ಈ ಕೆರೆ ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಿತು. ಇದರ ಜೊತೆಗೆ ಈ ಕೆರೆಯು ಮೀನುಗಾರಿಕೆಗು ಹೆಸರುವಾಸಿಯಾಗಿದೆ. ಹಲವಾರು ಜನರು ಇಲ್ಲಿ ಮೀನು ಹಿಡಿಯುವ ಹವ್ಯಾಸವನ್ನು ಪ್ರಾರಂಭಿಸಿ, ನಡೆಸಿಕೊಂಡು ಬರುತ್ತಿದ್ದಾರೆ. ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯ ಅಂಗವಾಗಿ ಇಲ್ಲಿ ದೀಪಗಳನ್ನು, ಶಿಲಾ ಉದ್ಯಾನವನ, ತೇಲಾಡುವ ಕಾರಂಜಿ ಮತ್ತು ಕೃತಕ ಜಲಪಾತಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಈ ಕೆರೆಯಲ್ಲಿ ಚಾರಣ, ಶಿಲಾರೋಹಣ ಮತ್ತು ನೌಕಾಯಾನದಂತಹ ಹಲವಾರು ವಿನೋದಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶವಿದೆ.


Click it and Unblock the Notifications