Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು » ರಾಖಿಗರಹಿ

ರಾಖಿಗರಹಿ, ಹಿಸಾರ್

1

ರಾಖಿ ಶಹಪುರ ಅಥವಾ ರಾಖಿ ಖಾಸ್ ಎಂದೂ ಕರೆಯಲಾಗುವ ರಾಖಿಗರಹಿ ಹಳ್ಳಿ ಹಿಸಾರ್ ಜಿಲ್ಲೆಯಲ್ಲಿದೆ. ಸರ್ವೇ ಆಫ್ ಇಂಡಿಯಾ ಮೊದಲು 1963ರಲ್ಲಿ ನಂತರ 1997ರಲ್ಲಿ ನಡೆಸಿದ ಉತ್ಖನನದಿಂದಾಗಿ ಈ ಸ್ಥಳದ ಐತಿಹಾಸಿಕ ಮಹತ್ವ ತಿಳಿದುಬಂದಿತು.

ಸುಮಾರು ಕ್ರಿ.ಪೂ. 2000 ವರ್ಷಗಳ ಹಿಂದೆ ಇದ್ದಿತೆನ್ನಲಾದ ಮತ್ತು ಒಣಗಿಹೋಗಿರುವ ಸರಸ್ವತಿ ನದಿಯ ಪಾತಳಿಯ ಮೇಲೆ ಈ ಹಳ್ಳಿ ನಿರ್ಮಾಣವಾಗಿದೆ. ಇದು ಹರಪ್ಪನ್ ಮತ್ತು ಇಂಡಸ್ ವ್ಯಾಲಿ ನಾಗರಿಕತೆಯ ಭಾಗವಾಗಿತ್ತು.

ಈ ರಾಖಿಗರಹಿ ಐತಿಹಾಸಿಕ ಸ್ಥಳ ಸುಮಾರು 224 ಹೆಕ್ಟೇರು ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇದು ಮೋಹೆಂಜೋದಾರೋಗಿಂತಲೂ ದೊಡ್ಡದಾಗಿದ್ದು, ಭಾರತದ ಅತಿ ಮುಖ್ಯ ಪ್ರಾಚ್ಯಶಾಸ್ತ್ರ ಸ್ಥಳಗಳಲ್ಲಿ ಒಂದಾಗಿದೆ. ಆ ಕಾಲದಲ್ಲಿ ಇಂಡಸ್ ವ್ಯಾಲಿ ನಾಗರಿಕತೆ ಎಷ್ಟು ಮುಂದುವರಿದಿತ್ತು ಎಂಬುದು ಉತ್ಖನನದಿಂದ ತಿಳಿದುಬಂದಿದೆ.

ಇಟ್ಟಿಗೆಯಿಂದ ನಿರ್ಮಿಸಲಾಗಿದ್ದ ಚರಂಡಿ, ಟೆರ್ರಕೋಟ ಪುತ್ಥಳಿ, ಕಂಚಿನ ವಸ್ತುಗಳು, ತೂಕಗಳು, ತಾಮ್ರದಿಂದ ತಯಾರಿಸಲಾಗಿದ್ದ ಮೀನು ಹಿಡಿಯುವ ಕೊಕ್ಕೆ, ಸೀಲು ಮತ್ತು ಸೂಜಿಗಳು ಉತ್ಖನನದಲ್ಲಿ ದೊರೆತಿವೆ. ಬೆಳ್ಳಿ ಮತ್ತು ಬಂಗಾರದಿಂದ ಅಲಂಕೃತಗೊಂಡಿರುವ ಕಂಚಿನ ಪಾತ್ರೆ, ಸುಮಾರು 3000 ಅಮೂಲ್ಯ ಕಲ್ಲುಗಳಿದ್ದ ಬಂಗಾರದ ಬೋಗುಣಿ, 11 ಅಸ್ತಿಪಂಜರಗಳಿದ್ದ ರುದ್ರಭೂಮಿ, ಟೆರ್ರಕೋಟ ಬಳೆಗಳು, ಶಂಖಗಳು, ಬಂಗಾರದ ಆಭರಣ ಮತ್ತಿತರ ಅಮೂಲ್ಯ ವಸ್ತುಗಳು ಇಲ್ಲಿ ಸಿಕ್ಕಿವೆ. ಇವುಗಳಲ್ಲಿ ಕೆಲವು 5000 ವರ್ಷಗಳಷ್ಟು ಹಳೆಯದಾಗಿವೆ ಎಂದು ಅಂದಾಜಿಸಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat