Search
  • Follow NativePlanet
Share
ಮುಖಪುಟ » ಸ್ಥಳಗಳು » ಹಸ್ತಿನಾಪುರ » ಆಕರ್ಷಣೆಗಳು » ಹಸ್ತಿನಾಪುರದ ಅಭಯಾರಣ್ಯ

ಹಸ್ತಿನಾಪುರದ ಅಭಯಾರಣ್ಯ, ಹಸ್ತಿನಾಪುರ

1

ಇದನ್ನು ಹಸ್ತಿನಾಪುರದ ರಾಷ್ಟ್ರೀಯ ಉದ್ಯಾನವನ ಎಂತಲೂ ಕರೆಯುತ್ತಾರೆ. ಇಲ್ಲಿ ನೀವು ಪ್ರಕೃತಿಯ ರಮಣೀಯ ಅದ್ಭುತ ಅಂಶಗಳನ್ನು ಮತ್ತು ಕೆಲವು ಪ್ರಾಚೀನ ರಚನೆಗಳನ್ನು ಕಾಣಬಹುದು. ಈ ಅಭಯಾರಣ್ಯವನ್ನು ಔಪಚಾರಿಕವಾಗಿ 1986 ರಲ್ಲಿ ಸ್ಥಾಪಿಸಲಾಯಿತು. ಈ ಅಭಯಾರಣ್ಯವು 2073 ಚದುರ ಕೀಲೋ ಮೀಟರನಷ್ಟು ವ್ಯಾಪಿಸಿದೆ. ಇದು  ಜವುಗು ಭೂಮಿಯನ್ನು ಹೊಂದಿದ್ದು, ಗಂಗಾ ನದಿಯ ತೀರದ ಉದ್ದಕ್ಕೂ ಹಬ್ಬದೆ. ಇದು ನಾನಾ ತರಹದ ವರ್ಗಗಳಿಗೆ ಸೇರಿದ ಪ್ರಾಣಿಗಳಿಗೆ, ಸಸ್ಯಗಳಿಗೆ ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ.

ಒಂದು ಅಂದಾಜಿನ ಪ್ರಕಾರ ಇಲ್ಲಿ 350 ಪಕ್ಷಿ ಪ್ರಬೇಧಗಳನ್ನು ಇಲ್ಲಿ ಕಾಣಬಹುದಾಗಿದೆ. ಬಣ್ಣದ ಕೊಕ್ಕರೆ, ಸಾರಸ ಕ್ರೇನ,ಕಪ್ಪು ಮತ್ತು ಬಿಳಿ ಕುತ್ತಿಗೆಯ ಕೊಕ್ಕರೆಗಳು,ಮತ್ತು ಬೇಟೆ ನಿಶಾಚರ ಪಕ್ಷಿಗಳಾದ ಗೂಬೆ, ಕಾಡು ಹಾಲಕ್ಕಿ, ಮರುಕುಟಿಗ, ಕಿಂಗ ಫಿಷರ ಮತ್ತು ಕೀಟ ಭಕ್ಷಕ ಮತ್ತು ಬುಲಬುಲಗಳು ಸೇರಿದಂತೆ ಅನೇಕ ಪಕ್ಷಿಗಳು ಇಲ್ಲಿವೆ.

ಈ ಅಭಯಾರಣ್ಯವು ಅದ್ಭುತ ಪ್ರಾಣಿ ಸಂಪತ್ತಿನ ಅನೇಕ ತಾಣಗಳನ್ನು ಒಳಗೊಂಡಿದೆ. ಇಲ್ಲಿ ಅನೇಕ ಸ್ತನಿವರ್ಗದ ಪ್ರಾಣಿಗಳನ್ನು ನೀವು ನೋಡಬಹುದು. ಇಲ್ಲಿ ಸರೀಸೃಪಗಳಾದಂತಹ ವಿವಿಧ ಜಾತಿಯ ಹಲ್ಲಿಗಳನ್ನು, ಹಾವುಗಳನ್ನು ನೋಡಬಹುದು. ಉಭಯ ಚರಗಳಾದಂತಹ ಕಪ್ಪೆ, ನೆಲಗಪ್ಪೆಗಳನ್ನು ಮತ್ತು ಬಣ್ಣದ ಚಿಟ್ಟೆಗಳನ್ನು, ಮೀನುಗಳನ್ನು ಸಹ ಈ ಅಭಯಾರಣ್ಯ ಹೊಂದಿದೆ. ಇದು ಅಶೇರುಕಗಳಾದಂತಹ ನಾನಾ ತರಹದ ಹುಳುಗಳು, ಜರಿಗಳು, ಚೇಳುಗಳು, ಜೇನು ನೊಣಗಳನ್ನು ಈ ಅಭಯಾರಣ್ಯದಲ್ಲಿ ಕಾಣಬಹುದಾಗಿದೆ.

ಇದಕ್ಕಿಂತ ಹೆಚ್ಚಾಗಿ ಈ ಅಭಯಾರಣ್ಯದಲ್ಲಿ ನಮ್ಮ ರಾಷ್ಟ್ರೀಯ ಪಕ್ಷಿಯಾದ ನವಿಲುಗಳು ಅಸಂಖ್ಯಾತ ಸಂಖ್ಯೆಯಲ್ಲಿವೆ. ದುರದೃಷ್ಟಾವಶಾತ ಈ ಅಭಯಾರಣ್ಯದ ಮೂಲ ಪರಿಸರ ಸ್ವರೂಪವನ್ನು, ಇದರ ಸುತ್ತಮುತ್ತಲೂ ಕೈಗಾರಿಕೆಗಳನ್ನು, ಗಣಿಗಳನ್ನು, ಇಟ್ಟಿಗೆ ಗೂಡುಗಳನ್ನು , ಇನ್ನು ಅನೇಕ ರೀತಿಯ ಕಾರ್ಖಾನೆಗಳನ್ನು ನಿರ್ಮಿಸುವ ಮೂಲಕ ಧ್ವಂಸಗೊಳಿಸಲಾಗುತ್ತಿದೆ. ಈ ಮೂಲಕ ಇಲ್ಲಿನ ಅಮೂಲ್ಯ ನೈಸರ್ಗಿಕ ಸಂಪತ್ತು ನಾಶವಾಗುತ್ತಿದೆ. ಇದಕ್ಕೆ ರಕ್ಷಣೆಯೇ ಇಲ್ಲದಂತಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu