India
Search
 • Follow NativePlanet
Share
ಮುಖಪುಟ » ಸ್ಥಳಗಳು » ಹಂಪಿ » ಆಕರ್ಷಣೆಗಳು » ವಿಟ್ಠಲ ದೇವಾಲಯ

ವಿಟ್ಠಲ ದೇವಾಲಯ, ಹಂಪಿ

4

ಇದು 16ನೇ ಶತಮಾನದ್ದಾಗಿದ್ದು, ವಿಟ್ಠಲ ಅಥವಾ ವಿಷ್ಣು ದೇವರಿಗೆ ಅರ್ಪಿತವಾಗಿದೆ. ಈ ದೇವಾಲಯವು ಸೌಂದರ್ಯಭರಿತವಾದ ಜಟೀಲ ವಿನ್ಯಾಸ ಹಾಗು ಇಲ್ಲಿ ಬೇರೆಲ್ಲೂ ಇರದ ಅದ್ಭುತ ವಾಸ್ತುಗಾರಿಕೆಯನ್ನು ಹೊಂದಿದ್ದು, ಇಲ್ಲಿ ಬರುವ ಪ್ರವಾಸಿಗರು ನೋಡಲೆ ಬೇಕಾದ ಒಂದು ಸ್ಥಳವಾಗಿದೆ. ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ತಟದಲ್ಲಿದ್ದು, ಮೂಲ ದಕ್ಷಿಣ ಭಾರತದ ದ್ರಾವಿಡಿಯನ ಶೈಲಿಯ ಮಾದರಿಯ ಗುಡಿಗಳ ವಾಸ್ತುಶಿಲ್ಪವನ್ನು ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಶೈಲಿಯ ಛಾಪನ್ನು ಹೊಂದಿದ ಈ ದೇವಾಲಯವು ದೇವರಾಯ2 ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿದೆ.ಸುಶೋಭಿತ ಸ್ಥಂಬಗಳು ಮತ್ತು ಸೂಕ್ಷ್ಮ ಕೆತ್ತನೆಯ ಕೆಲಸಗಳು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಈ ದೇವಾಲಯದ ಅದ್ಭುತ ವಿಷಯವೆಂದರೆ, ಇದರ ರಂಗಮಂಟಪ ಹಾಗು ಬಡಿದಾಗ ಸಂಗೀತವನ್ನು ಹೊರಸೂಸುವ 56 ಸಂಗೀತಮಯ ಸ್ಥಂಬಗಳು. ಮೂರ್ತಿಗಳನ್ನು ಒಳಭಾಗದಲ್ಲಿ ಇರಿಸಲಾಗಿದ್ದು, ಕೇವಲ ಪ್ರಧಾನ ಅರ್ಚಕನಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ದೇವಾಲಯದ ಚಿಕ್ಕ ಭಾಗವನ್ನು ಮಾತ್ರ ನೋಡಲು ಅವಕಾಶವಿದ್ದು, ಹೊರಬದಿಯ ಅಲಂಕಾರಗಳನ್ನು ವೀಕ್ಷಿಸಬಹುದಾಗಿದೆ.

ಗುಡಿಯ ಹೊರ ಆವರಣದಲ್ಲಿ ಕಲ್ಲಿನ ರಥವನ್ನು ಕಾಣಬಹುದು. ಆವರಣದ ಪೂರ್ವ ಭಾಗದಲ್ಲಿರುವ ಈ  ಭಾರವಾದ ರಥವು ಕಲ್ಲಿನ ಚಕ್ರಗಳನ್ನು ಹೊಂದಿದ್ದು ಈಗಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಅನೇಕ ಮಂದಿರಗಳು ಮತ್ತು ಕೊಠಡಿಗಳನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue