ಪೋವಾ ಮೆಕ್ಕಾದಲ್ಲಿ ಮೆಕ್ಕಾದ ಪಾವಿತ್ರ್ಯತೆ ಇದೆ ಎನ್ನುವುದು ನಂಬಿಕೆ. ಇದು ಮುಸ್ಲಿಂರ ಪ್ರಸಿದ್ದ ಧಾರ್ಮಿಕ ಸ್ಥಳವಾಗಿದ್ದು, ಈಶಾನ್ಯ ಭಾರತದ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ. ಇದನ್ನು ಮೆಕ್ಕಾದಿಂದ ತಂದ ಮರಳಿನಿಂದ ನಿರ್ಮಿಸಲಾಗಿದೆ ಎನ್ನುವ ಮಾತಿದೆ. ಪೋವಾ ಎಂದರೆ ನಾಲ್ಕನೇ ಒಂದು ಹಾಗಾಗಿ ಇದಕ್ಕೆ ಪೋವಾ ಮೆಕ್ಕಾ ಎಂದು ಕರೆಯುತ್ತಾರೆ. ಈ ಮಸೀದಿಯು ಮೆಕ್ಕಾದ ನಾಲ್ಕನೇ ಒಂದು ಭಾಗದಷ್ಟು ಪಾವಿತ್ರ್ಯತೆಯನ್ನು ಹೊಂದಿದೆ, ಮೆಕ್ಕಾ ಮುಸ್ಲಿಂರ ಅತ್ಯಂತ ಪ್ರವಿತ್ರ ಸ್ಥಳ.ಈ ಮಸೀದಿಯನ್ನು ಮೀರ್ ಲುತುಫುಲ್ಲಾ-ಇ-ಶಿರಾಜಿ ಮೊಘಲರ ಕಾಲದಲ್ಲಿ ನಿರ್ಮಿಸಿದ.
ಪ್ರತಿ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಭಾಂಧವರು ಪೀರ್ ಗಿಯಾಸುದ್ದೀನ್ ಆಯುಲ್ಯಾ ಗೋರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪೋವಾ ಮೆಕ್ಕಾ ಅತ್ಯಾಕರ್ಷಕ ಶಿಲ್ಪಕಲೆಗೆ ಪ್ರವಾಸಿಗರು ಮಾರು ಹೋಗುತ್ತಾರೆ. ಪೋವಾ ಮೆಕ್ಕಾ ಮಸೀದಿ ಹಯಗ್ರಿವ ಮಾಧವ ದೇವಾಲಯದ ಸಮೀಪದಲ್ಲಿದೆ.


Click it and Unblock the Notifications