Search
  • Follow NativePlanet
Share
ಮುಖಪುಟ » ಸ್ಥಳಗಳು » ಗುವಾಹಾಟಿ » ಆಕರ್ಷಣೆಗಳು » ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯ

ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯ, ಗುವಾಹಾಟಿ

1

ಅಸ್ಸಾಂ ನ ಸಂಪ್ರದಾಯ ಮತ್ತು ಸಂಸ್ಕೃತಿಯತ್ತ ಒಂದು ನೋಟವನ್ನು ಬೀರಬೇಕಾದರೆ, ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯಕ್ಕೆ ಒಂದು ಭೇಟಿ ನೀಡುವುದು ಅತೀ ಅವಶ್ಯಕ.  ಈ ಸಂಗ್ರಹಾಲಯವು ಗುವಾಹಾಟಿಯ ಹೃದಯಭಾಗದಲ್ಲಿರುವ ದಿಘಾಲಿಪುಖುರಿ ತೊಟ್ಟಿಗೆ ದಕ್ಷಿಣ ದಿಕ್ಕಿನಲ್ಲಿದೆ.  ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯವು ಇತಿಹಾಸ, ಶಾಸನಗಳು, ಪುರಾತನ ನಾಣ್ಯಗಳು, ಮತ್ತು ಲಾಂಛನಗಳಿಗೆ ಸಂಬಂಧಿಸಿದಂತೆ ಹಲವಾರು ಆಸಕ್ತಿದಾಯಕ ಕಲಾ ವಸ್ತುಗಳ ಸಂಗ್ರಹಾಗಾರವಾಗಿದೆ.

ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯವನ್ನು 1940 ರಲ್ಲಿ ಕಾಮರೂಪ ಅನುಸಂಧಾನ ಸಮಿತಿ (Assam Research Society)ಯವರು ನಿರ್ಮಿಸಿದರು.  ಆರಂಭದಲ್ಲಿ ಇದು ಖಾಸಗಿಯವರ ಮಾಲಕತ್ವಕ್ಕೆ ಒಳಪಟ್ಟಿದ್ದು, ಇದರ ಸ್ಥಾಪಕ ಅಧ್ಯಕ್ಷರು ದಿ. ಕಂಕಲ್ ಬರುವಾ ಅವರು ಆಗಿದ್ದರು.  1953 ರಲ್ಲಿ, ರಾಜ್ಯ ಸರಕಾರವು ಇದನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತು.

ಈ ಸಂಗ್ರಹಾಲಯವು ಪುರಾತನ ಅಸ್ಸಾಮಿ ನಾಣ್ಯಗಳು, ಸಾಂಪ್ರದಾಯಿಕ ಕಲೆಗಳು, ವಿವಿಧ ಆಯಾಮಗಳ ಕೆತ್ತನೆ ಕೆಲಸ, ಮತ್ತು ಸಾಂಪ್ರದಾಯಿಕ ಉಡುಗೆತೊಡುಗೆ ಮೊದಲಾದವುಗಳ ಆಸಕ್ತಿದಾಯಕ ಸಂಗ್ರಹಾಗಾರವೆಂದು ಪರಿಗಣಿತವಾಗಿದೆ.  ರಾಜ್ಯದ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಅಸ್ಸಾಂ ರಾಜ್ಯ ವಸ್ತುಸಂಗ್ರಹಾಲಯವು ಕರಕುಶಲ ವಸ್ತುಗಳ ಮತ್ತು ಕೈಮಗ್ಗದ ಉತ್ಪನ್ನಗಳ ವಸ್ತುಪ್ರದರ್ಶನ ಇತ್ಯಾದಿಗಳನ್ನೂ ಕೂಡ ಆಯೋಜಿಸುತ್ತದೆ.  ಸಂಗ್ರಹಾಲಯವು ಮಂಗಳವಾರದಿಂದ ಭಾನುವಾರದವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವೆರೆಗೆ ತೆರೆದಿರುತ್ತದೆ.  ಈ ಸಂಗ್ರಹಾಲಯವು ಕೇಂದ್ರಭಾಗದಲ್ಲಿರುವುದರಿಂದ ಪ್ರವಾಸಿಗರು ಇಲ್ಲಿಗೆ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat