ಗುಂಟೂರಿನ ಇತಿಹಾಸದ ಭೂತಕಾಲದ ಭಾಗವಾಗಿರುವುದು ಕೊಂಡವೀಡು ಕೋಟೆ. ಈ ಕೋಟೆ ಗುಂಟೂರಿನ ಹೊರಭಾಗದಿಂದ 17 ಮೈಲು ದೂರದಲ್ಲಿದ್ದು ಉತ್ತಮವಾದ ರಸ್ತೆಗಳಿರುವುದರಿಂದ ಆರಾಮವಾಗಿ ತಲುಪಬಹುದು.
14 ನೇ ಶತಮಾನದ ಪ್ರಾರಂಭದಲ್ಲಿ ಈ ಐತಿಹಾಸಿಕ ಕೋಟೆಯನ್ನು ಕಟ್ಟಿಸಿದ್ದು ಆಡಳಿತಾತ್ಮಕ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದ ರೆಡ್ಡಿ ದೊರೆಗಳು. ಕೋಟೆಯೊಳಗೆ 21 ಆಕಾರಗಳಿವೆ. ಬಹುತೇಕ ರಚನೆಗಳು ವಿನಾಶದ ಸ್ಥಿತಿಯಲ್ಲಿದ್ದರೂ ಕೂಡ ಕೋಟೆಯೊಂದಿಗೆ ಹೊಂದಿಕೊಂಡಿರುವ ಹಲವಾರು ರಹಸ್ಯಗಳನ್ನು ಇವು ಆಳವಾಗಿ ಬಿಚ್ಚಿಡುತ್ತವೆ.
ಕೋಟೆಯೊಳಗಿನ ಸಹಜ ಸೌಂದರ್ಯವನ್ನು ಸವಿಯಲು ಹಲವು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಗೆ ಬರುವ ಹಲವು ಪ್ರವಾಸಿಗರು ಟ್ರೆಕ್ಕಿಂಗ್ ಮಾಡುವವುದು ಮತ್ತು ಕೋಟೆ ಹತ್ತುವುದನ್ನು ಇಷ್ಟಪಡುತ್ತಾರೆ.
ಕೋಟೆಗೆ ಸಮೀಪದಲ್ಲಿಯೇ ಗೋಪಿನಾಥ ದೇವಸ್ಥಾನ ಮತ್ತು ಕತುಲಬಾವೆ ದೇವಸ್ಥಾನಗಳಿವೆ. ಕೋಟೆಯ ದಾರಿಯಲ್ಲಿ ಇನ್ನೂ ಹಲವು ದಾರಿಗಳಿವೆ. ಕೋಟೆಯ ದ್ವಾರ ತೆರೆದುಕೊಳ್ಳುವುದು ಕೋಟೆ ತಲೆ ಎತ್ತಿನಿಂತಿರುವ ಬೆಟ್ಟಗಳ ಸಾಲಿನಲ್ಲಿ. ಈ ದ್ವಾರದ ಅಂಚಿನಲ್ಲಿಯೇ ಕೋಟೆಯ ವಾಸತಾಣಗಳು ಮತ್ತು ದೊಡ್ಡದಾದ ಸಭಾಗೃಹ ನೆಲೆನಿಂತಿದ್ದು ಇತಿಹಾಸದ ಪುರಾವೆ ಒದಗಿಸುತ್ತವೆ.


Click it and Unblock the Notifications