ಗುಂಟೂರಿನಿಂದ 21 ಕಿಲೋ ಮೀಟರ್ ದೂರದಲ್ಲಿರುವ ಮಂಗಲಗಿರಿ ಒಂದು ಚಿಕ್ಕ ಪಟ್ಟಣ. ಗುಂಟೂರು ಮತ್ತು ವಿಜಯವಾಡಾ ಭಾಗದಲ್ಲಿ ಮಂಗಲಗಿರಿ ಪ್ರಮುಖ ಪ್ರವಾಸಿ ಗಮ್ಯಸ್ಥಾನ.
ಮಂಗಲಗಿರಿ ಎಂಬುದರ ಸಾಹಿತ್ಯಿಕ ಅರ್ಥ ಪವಿತ್ರವಾದ ಬೆಟ್ಟ. ಮಂಗಲಗಿರಿ ಪ್ರಸಿದ್ದವಾಗಿರುವುದು ಇಲ್ಲಿರುವ ದೇವಸ್ಥಾನಗಳಿಗೆ ಮತ್ತು ಉತ್ತಮ ಗುಣಮಟ್ಟದ ಹತ್ತಿ ಬಟ್ಟೆಗಳಿಗೆ.
ಪ್ರಸಿದ್ದವಾದ ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನ ಇಲ್ಲಿಯೇ ಇದ್ದು ದೇವರಿಂದ ಆಶೀರ್ವಾದ ಪಡೆಯಲು ಹಲವಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ದೇವಸ್ಥಾನವನ್ನು ಬೆಟ್ಟದ ಮೇಲೆ ಕಟ್ಟಲಾಗಿದೆ. ನೂರಾರು ವರ್ಷಗಳ ಹಿಂದೆ ಈ ಬೆಟ್ಟ ಜೀವಂತ ಜ್ವಾಲಾಮುಖಿಯಾಗಿತ್ತು. ದೇವಸ್ಥಾನವನ್ನು ಸಮುದ್ರಮಟ್ಟದಿಂದ 30 ಮೀಟರ್ ಎತ್ತರಕ್ಕೆ ನಿರ್ಮಿಸಲಾಗಿದ್ದು ಬೆಲ್ಲದ ನೀರನ್ನು ಭಕ್ತರು ದೇವರಿಗೆ ಅರ್ಪಿಸುತ್ತಾರೆ.