Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಂಟೂರು » ಹವಾಮಾನ

ಗುಂಟೂರು ಹವಾಮಾನ

ಗುಂಟೂರಿಗೆ ಭೇಟಿ ನೀಡಲು ಉತ್ತಮವಾದ ಕಾಲವೆಂದರೆ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೇಬ್ರವರಿ. ಈ ವೇಳಯಲ್ಲಿ ವಾತಾವರಣ ಬೆಚ್ಚಗಿದ್ದರೂ ಅತಿಯಾದ ಬಿಸಿಯಿರುವುದಿಲ್ಲ. ಸೂರ್ಯನ ಶಾಖ ಮೈ ಸುಡುವುದಿಲ್ಲ. ಈ ಕಾಲದಲ್ಲಿ ಪ್ರವಾಸಕ್ಕೆ ಹೊರಡುವುದು ಹಿತಕರ. ಸಂಜೆ ಮತ್ತು ರಾತ್ರಿ ಚಳಿಯಿದ್ದು ಉಣ್ಣೆಯ ಬಟ್ಟೆಗಳನ್ನು ಇಟ್ಟುಕೊಳ್ಳುವುದು ವಾಸಿ.

ಬೇಸಿಗೆಗಾಲ

ಗುಂಟೂರಿನಲ್ಲಿನ ಬೇಸಿಗೆ ಬಿಸಿ, ಒಣ ಮತ್ತು ಶುಷ್ಕವಾಗಿರುತ್ತದೆ. ಫೆಬ್ರುವರಿಯ ಕೊನೆಯಲ್ಲಿ ಶುರುವಾಗುವ ಬೇಸಿಗೆ ಜೂನ್ ತಿಂಗಳ ಅಂತ್ಯದವರೆಗೂ ಮುಂದುವರೆಯುತ್ತದೆ. ಬಿಸಿಯಾದ ಬೇಸಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 42 ಡಿಗ್ರಿ ತಲುಪುತ್ತದೆ. ಈ ಸಮಯದಲ್ಲಿ ಗುಂಟೂರಿಗೆ ಪ್ರಯಾಣಿಸದೇ ಇರುವುದು ಒಳ್ಳೆಯದು.

ಮಳೆಗಾಲ

ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಗುಂಟೂರು ಮಳೆಹನಿಗಳನ್ನು ಕಾಣುತ್ತದೆ. ಬದಲಾಗುವ ಹವಾಮಾನದಿಂದಾಗಿ ಇಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೂ ಮಳೆ ಬೀಳುತ್ತದೆ. ಮಳೆಗಾಲದಲ್ಲಿ ವಾತಾವರಣದ ಬಿಸಿ 33 ಡಿಗ್ರಿಗೆ ಕುಸಿದಿರುತ್ತದೆ. ವಾತಾವರಣ ಹಿತವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಶುರುವಾಗುವ ಚಳಿ ಫೆಬ್ರುವರಿಯವರೆಗೆ ಮುಂದುವರೆಯುತ್ತದೆ. ಜನವರಿ ಅತ್ಯಂತ ಚಳಿಯ ಸಮಯ. ಚಳಿಗಾಲದಲ್ಲಿ ಸಾಮಾನ್ಯವಾಗಿ ತಾಪಮಾನವು 25 ಡಿಗ್ರಿಯಷ್ಟಿದ್ದು, ಸಂಜೆಯ ಹೊತ್ತು ತಂಪಾಗಿರುತ್ತದೆ ಮತ್ತು ರಾತ್ರಿಯಲ್ಲಿ ಮೈಕೊರೆಯುವ ಚಳಿ ಇರುತ್ತದೆ.