ಗುಲ್ಮಾರ್ಗ್ ನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಆಕರ್ಷಕ ಪ್ರವಾಸಿ ತಾಣ ದ್ರುಂಗ್. ಇದು ಇಲ್ಲಿನ ಇತ್ತೀಚಿನ ಆಕರ್ಷಣೆಯಾಗಿ ಆವಿಷ್ಕರಿಸಿದೆ. ಒಂದು ದಿನದ ಪ್ರವಾಸ, ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ತಾಣ. ಬಂಡೆ ಏರುವುದು, ಮೀನು ಹಿಡಿಯುವುದು ಇಲ್ಲಿನ ಜನಪ್ರಿಯ ಚಟುವಟಿಕೆ. ಭೂಗರ್ಭಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರು ಇಲ್ಲಿನ ಆಕರ್ಷಕ ದೇಗುಲಗಳ ಹಿಂದಿನ ಇತಿಹಾಸವನ್ನು ಕೆದಕಬಹುದಾಗಿದೆ. ಇಲ್ಲಿನ ಬೆಟ್ಟದಲ್ಲಿ ಸಣ್ಣದೊಂದು ಟ್ರೆಕ್ಕಿಂಗ್ ತೆರಳುವ ಅವಕಾಶವೂ ಲಭ್ಯವಿದೆ. ಇದು ಪಾಂಡವರ ದೇಗುಲ ಎಂದು ನಂಬಲಾಗುತ್ತದೆ.
ಪ್ರವಾಸಿಗರು ಇಲ್ಲಿ ಉಳಿಯುವುದಾದರೆ ಮುಂಚಿತವಾಗಿ ಹೋಟೆಲ್ ಕೋಣೆ ಬುಕ್ ಮಾಡಿಸಬೇಕು. ಇವು ತಂಗಮಾರ್ಗ್ ನಲ್ಲಿವೆ. ದ್ರುಂಗ್‌ನಿಂದ ಇದು ಮೂರು ಕಿ.ಮೀ. ದೂರದಲ್ಲಿದೆ. ತಂಗಮಾರ್ಗದ ಕೆಳಗಿಳಿಯುವ ದಾರಿಯಲ್ಲಿ ಫೆರೋಜ್ಪುರ್ ತೊರೆ ಕಾಣುತ್ತದೆ.


Click it and Unblock the Notifications