Search
  • Follow NativePlanet
Share
ಮುಖಪುಟ » ಸ್ಥಳಗಳು » ಗುಲ್ಮಾರ್ಗ್ » ಆಕರ್ಷಣೆಗಳು » ಅಚಬಲ್

ಅಚಬಲ್, ಗುಲ್ಮಾರ್ಗ್

2

ಅಚಬಲ್, ಮುಘಲ್‌ ಅರಸು ಜಹಾಂಗೀರ್‌ನ ಪತ್ನಿ ನೂರ್‌ ಜಹಾನ್‌ ನಿಂದ ನಿರ್ಮಿತವಾದ ಉದ್ಯಾನ. ಇದು ಪ್ರವಾಸಿಗರ ಪಾಲಿಗೆ ಒಂದು ಜನಪ್ರಿಯ ಸ್ಥಳ. ಕ್ರಿಸ್ತಶಕ 1620 ರಲ್ಲಿ ಇದರ ನಿರ್ಮಾಣ ಆಗಿದೆ. ಈ ಉದ್ಯಾನವು ಅತ್ಯಾಕರ್ಷಕ ತಾರಸಿ ಉದ್ಯಾನ ಎಂಬ ಖ್ಯಾತಿಗೆ ಭಾಜನವಾಗಿದೆ. ಚಿನಾರ್‌ ಮರಗಳು, ಕಾರಂಜಿ, ಹಚ್ಚ ಹಸಿರಾದ ಲಾನ್‌, ಈ ತಾಣದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಉದ್ಯಾನಕ್ಕೆ ಜಲಪಾತದ ನೀರು ಹರಿದು ಬರಲು ಅನುಕೂಲವಾಗುವ ರೀತಿ ನಿರ್ಮಿಸಲಾಗಿದೆ. ಈ ಮೊದಲು ಉದ್ಯಾನದ ಮೇಲ್ಭಾಗವು "ಬಾಗ್‌ ಎ ಬೇಗಂ ಅಬದ್‌" ಎಂದು ಕರೆಸಿಕೊಂಡಿತ್ತು. ಇದು ಹಮಾಮ್‌ ಅಥವಾ ನೀರಿನ ಖಜಾನೆ ಅನ್ನಿಸಿಕೊಂಡಿದೆ. ನಂತರದ ಸಮಯದಲ್ಲಿ ಇದು 'ಸಾಹೀಬ್‌ ಅಬದ್‌' ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಮುಘಲ್‌ ರಾಜ, ದಾರಾ ಶಿಖೋಹ್‌  ಎಂಬುವರು ನಂತರದಲ್ಲಿ ಈ ಉದ್ಯಾನದಲ್ಲಿ ಒಂದು ಮಸೀದಿಯನ್ನೂ ನಿರ್ಮಿಸಿದರು.

ಅನಂತನಾಗ್‌ನಿಂದ ಅಚಬಲ್ 8 ಕಿ.ಮೀ. ದೂರದಲ್ಲಿದೆ. ಇನ್ನು ಶ್ರೀನಗರದಿಂದ ಇದರ ದೂರ ಕೇವಲ 56 ಕಿ.ಮೀ. ಮಾತ್ರ. ಪ್ರವಾಸಿಗರಿಗೆ ಇಲ್ಲಿ ತಂಗಲು ಪ್ರವಾಸಿ ಮಂದಿರ ಸೌಲಭ್ಯ ಇದೆ. ಇದಲ್ಲದೇ ವಿಶ್ರಾಂತಿ ಕೇಂದ್ರಗಳೂ ಇವೆ. ಇವೆಲ್ಲವೂ ಈ ತಾಣಕ್ಕೆ ಸಮೀಪದಲ್ಲಿಯೇ ಇವೆ. ಕ್ಯಾಂಪ್‌ ಹಾಗೂ ಮೀನುಹಿಡಿಯುವ ಕಾರ್ಯಕ್ಕೆ ಕೂಡ ಇಲ್ಲಿಗೆ ಸಮೀಪದಲ್ಲಿಯೇ ಸಾಕಷ್ಟು ಅವಕಾಶ ಇದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue