ಗದಗ್ ಜಿಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ ಕುರ್ತಕೋಟಿ. ಇಲ್ಲಿರುವ ದೇವಸ್ಥಾನಗಳು ಈ ಹಳ್ಳಿಯನ್ನೂ ಜನಪ್ರಿಯವಾಗಿಸಿದವು. ಶ್ರೀ ಉಗ್ರ ನರಸಿಂಹ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನ ಮತ್ತು ದತ್ತಾತ್ರೇಯ ದೇವಸ್ಥಾನವು ಹಿಂದೂಗಳಿಗೆ ಅತ್ಯಂತ ಪವಿತ್ರವಾದವು. ಈ ದೇವಸ್ಥಾನಗಳ ಜೊತೆಗೆ ರಾಮ ದೇವಸ್ಥಾನ ಮತ್ತು ಅಲ್ಲಮ ಪ್ರಭು ಮಠವೂ ಇದೆ. ರಾಮ ದೇವಸ್ಥಾನದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತೆಯ ಮೂರ್ತಿಗಳಿವೆ. ಇದನ್ನು ಸ್ಥಾಪಿಸಿದ್ದವರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜರು. ಇದರ ಧಾರ್ಮಿಕ ಮಹತ್ವದಿಂದಾಗಿ ಧರ್ಮಶ್ರದ್ಧೆಯುಳ್ಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.


Click it and Unblock the Notifications