Search
  • Follow NativePlanet
Share
ಮುಖಪುಟ » ಸ್ಥಳಗಳು » ಗದಗ್ » ಹವಾಮಾನ

ಗದಗ್ ಹವಾಮಾನ

ಗದಗಕ್ಕೆ ಭೇಟಿ ನೀಡಲು ಚಳಿಗಾಲ ಉತ್ತಮ ಅವಧಿ. ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಈ ವಾತಾವರಣವೇ ಸೂಕ್ತ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಗದಗಿನ ವಾತಾವರಣವು ಬೇಸಿಗೆಯಲ್ಲಿ ಅತ್ಯಂತ ಉಷ್ಣ, ಒಣ ಹವೆಯಿಂದ ಕೂಡಿರುತ್ತದೆ. ಗರಿಷ್ಠ ತಾಪಮಾನವು 35 ಡಿಗ್ರಿಯ ತನಕವೂ ಹೋಗುತ್ತದೆ. ಕನಿಷ್ಟ ತಾಪಮಾನವು 27 ಡಿಗ್ರಿಯ ತನಕವೂ ಇಳಿಯುತ್ತದೆ. ಗದಗಿಗೆ ಭೇಟಿ ನೀಡಲು ಇದು ಸೂಕ್ತ ಸಮಯ ಅಲ್ಲವೇ ಅಲ್ಲ.

ಮಳೆಗಾಲ

(ಜುಲೈನಿಂದ ಸಪ್ಟೆಂಬರ‍್): ಗದಗಿನ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಆದರೆ ಅಕ್ಟೋಬರಿನಲ್ಲಿ ಕಡಿಮೆ ಮಳೆ. ಮಳೆಗಾಲ ಯಾವತ್ತೂ ಪ್ರವಾಸಿಗರಿಗೆ ಸೂಕ್ತ ಕಾಲವಲ್ಲ.

ಚಳಿಗಾಲ

 (ಅಕ್ಟೋಬರಿನಿಂದ ಮಾರ್ಚ್‌): ಚಳಿಗಾಲದಲ್ಲಿ ಇಲ್ಲಿನ ವಾತಾವರಣ ಪ್ರಶಾಂತವಾಗಿರುತ್ತದೆ. ರಾತ್ರಿಯ ತಾಪಮಾನ 18 ಡಿಗ್ರಿಯ ತನಕವೂ ಇಳಿಯುತ್ತದೆ. ಆದರೆ ಹಗಲಿನಲ್ಲಿ 28 ಡಿಗ್ರಿ ತಾಪಮಾನ ಸರಾಸರಿ ಇರುತ್ತದೆ.