1897ರಲ್ಲಿ ನಡೆದ ಯುದ್ಧದ ನೆನಪಿಗಾಗಿ ಸಾರಗಡಿ ಸ್ಮಾರಕ ಗುರುದ್ವಾರವನ್ನು ನಿರ್ಮಿಸಲಾಗಿತ್ತು. ವರ್ಜಿಸ್ತಾನದಲ್ಲಿರುವ ಸಾರಗಡಿ ಕೋಟೆಯನ್ನು ರಕ್ಷಿಸಲು ನೂರಾರು ಮಂದಿ ಪಠಾಣ್ ಗಳ ವಿರುದ್ಧ ಹೋರಾಡಿ ಹುತಾತ್ಮರಾದ `36 ಸಿಖ್ ರೆಜಿಮೆಂಟ್' ನ 21 ಸಿಖ್ ಸೈನಿಕರಿಗೆ ಗೌರವ ಸೂಚಕವಾಗಿ ಇದನ್ನು ನಿರ್ಮಿಸಲಾಗಿದೆ. ಈ ಸ್ಮಾರಕ ಗುರುದ್ವಾರದ ಸುತ್ತ ಫಿರಂಗಿಗಳಿವೆ ಮತ್ತು ಇದರ ಗೋಡೆಗಳಲ್ಲಿ 21 ಮಂದಿ ಯೋಧರ ಹೆಸರನ್ನು ಬರೆಯಲಾಗಿದೆ. ಪ್ರತೀ ವರ್ಷ ಸಪ್ಟೆಂಬರ್ 12 ರಂದು ಧಾರ್ಮಿಕ ಸಭೆ ನಡೆಯುತ್ತದೆ ಮತ್ತು ಸಂಜೆ ವೇಳೆ ಮಾಜಿ ಸೈನಿಕರ ಪುನರ್ಮಿಲನ ಕಾರ್ಯಕ್ರಮ ನಡೆಯುತ್ತದೆ. ಹುತಾತ್ಮಕರಿಗೆ ಗೌರವ ಸೂಚಿಸುವ ಸಲುವಾಗಿ ಸಭೆಯ ದಿನ ಸಾವಿರಾರು ಮಂದಿ ಇಲ್ಲಿ ಸೇರುತ್ತಾರೆ.


Click it and Unblock the Notifications