Search
  • Follow NativePlanet
Share
ಮುಖಪುಟ » ಸ್ಥಳಗಳು » ಫಿರೋಜ್ಪುರ » ಹವಾಮಾನ

ಫಿರೋಜ್ಪುರ ಹವಾಮಾನ

ಅಕ್ಟೋಬರ್ ಮತ್ತು ಡಿಸೆಂಬರ್ ಮಧ್ಯೆ ಫಿರೊಜ್ಪುರಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಈ ವೇಳೆ ಹವಾಮಾನ ಹಿತಕರವಾಗಿರುತ್ತದೆ. ಪ್ರೇಕ್ಷಣೀಯ ಸ್ಥಳ ವೀಕ್ಷಣೆ ಮತ್ತು ಇತರ ಹೊರಾಂಗಣ ಚಟುವಟಿಕೆಗಳಿಗೆ ಯೋಗ್ಯ ಸಮಯವಾಗಿದೆ. 

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ನಿಂದ ಜೂನ್ ನಿಂದ ಫಿರೊಜ್ಪುರದಲ್ಲಿ ಬೇಸಿಗೆ ಕಾಲವಿರುತ್ತದೆ. ಜೂನ್ ನಲ್ಲಿ ಅತಿಯಾದ ಉಷ್ಣತೆಯಿರುತ್ತದೆ. ಈ ವೇಳೆ ಗರಿಷ್ಠ ಉಷ್ಣಾಂಶ 47 ಡಿಗ್ರಿ ಸೆಲ್ಸಿಯಸ್ ತನಕ ಏರುತ್ತದೆ.

ಮಳೆಗಾಲ

(ಜುಲೈನಿಂದ ಅಕ್ಟೋಬರ್): ಜುಲೈನಲ್ಲಿ ಆರಂಭವಾಗಲಿರುವ ಮಳೆಗಾಲವು ಸಪ್ಟೆಂಬರ್ ಮಧ್ಯಭಾಗದ ತನಕವಿರುತ್ತದೆ. ಬೇಸಿಗೆ ಕಾಲದ ಉಷ್ಣತೆಯನ್ನು ಪರಿಗಣಿಸಿದರೆ ಈ ವೇಳೆ ಉಷ್ಣಾಂಶ ತುಂಬಾ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಇದು ಏರಿಕೆಯಾಗುತ್ತದೆ. ಸಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್ ತಿಂಗಳನ್ನು ಮುಂಗಾರಿನ ನಂತರದ ಅವಧಿಯೆಂದು ಪರಿಗಣಿಸಲಾಗಿದ್ದು, ಚಂಡಮಾರುತವು ಬರುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರವರಿ): ನವಂಬರ್ ಚಳಿಗಾಲದ ಆರಂಭದ ತಿಂಗಳಾಗಿದ್ದು, ಫೆಬ್ರವರಿ ತನಕ ಇದು ಮುಂದುವರಿಯುತ್ತದೆ. ಜನವರಿ ತಿಂಗಳಲ್ಲಿ ಅತಿಯಾದ ಚಳಿಯಿರುತ್ತದೆ.