ಪೊಥಿಮಾಲವನ್ನು 1745ರಲ್ಲಿ ಗುರು ಜೀವನ್ ಮಾಲ ಅವರು ನಿರ್ಮಿಸಿದ್ದರು. ಪೋಥಿ(ಧರ್ಮ ಗ್ರಂಧ) ಮತ್ತು ಶ್ರೀ ಗುರು ನಾನಕ್ ಜಿ ಅವರ ಮಾಲ(ಸರ)ದಿಂದ ಪೋಥಿಮಾಲ ಹೆಸರು ಬಂದಿದೆ. ಇವೆರಡನ್ನು ಇಲ್ಲಿಡಲಾಗಿದೆ. ಗುರು ಜಿ ಅವರ ಪಾದಂ ಮತ್ತು ಸಾಲಿಗ್ರಾಮವನ್ನು ಕೂಡ ಪ್ರವಾಸಿಗಳು ಇಲ್ಲಿ ವೀಕ್ಷಿಸಬಹುದಾಗಿದೆ. ಹೊಸ ಸಮ್ಮತ್ ವೇಳೆ ಪ್ರತೀ ವರ್ಷ ಪೊಥಿಮಾಲದಲ್ಲಿ ವಾರ್ಷಿಕ ಮೇಳ ನಡೆಯುತ್ತದೆ. ಇದು ಗುರು ಹರ್ ಶಾಯಿ ಗ್ರಾಮದಲ್ಲಿದ್ದು, ಸಮೀಪದ ನಗರಗಳಿಂದ ರಸ್ತೆ ಮೂಲಕ ಇಲ್ಲಿಗೆ ಸುಲಭವಾಗಿ ಪ್ರಯಾಣಿಸಬಹುದು.