ಗುರುದ್ವಾರ ಗುರು ಕಿ ಧಾಬ್ ಎಂಬುದು ಒಂದು ಅದ್ಭುತವಾದ ಸ್ಮಾರಕವಾಗಿದೆ. ಇದನ್ನು ಗುರುದ್ವಾರ ಪಾಟ್‍ಶಾಹಿ ದಸ್ವಿನ್ ಮತ್ತು ದೊಡ ತಾಲ್ ಎಂದು ಸಹ ಕರೆಯುತ್ತಾರೆ. ಈ ಗುರುದ್ವಾರವು ಕೊಟ್ಕಪುರದಿಂದ ಜೈತುಗೆ ಸಾಗುವ ಹಾದಿಯಲ್ಲಿ 12 ಕಿ.ಮೀ ದೂರದಲ್ಲಿರುವ ಸಣ್ಣ ಗ್ರಾಮ ಗುರು ಕಿ ಧಾಬ್ ಎಂಬಲ್ಲಿ ನೆಲೆಗೊಂಡಿದೆ. ಜನಪದ ಕತೆಗಳ ಪ್ರಕಾರ ಶ್ರೀ ಗುರು ಗೋಬಿಂದ್ ಸಿಂಗ್ ಜೀಯವರು ಈ ಮಾರ್ಗವಾಗಿ ಹೋಗುತ್ತಿದ್ದಾಗ ಈ ಊರಿಗೆ ಭೇಟಿ ನೀಡಿದ್ದರಂತೆ.


Click it and Unblock the Notifications