Search
  • Follow NativePlanet
Share
ಮುಖಪುಟ » ಸ್ಥಳಗಳು » ಫರಿದ್ಕೋಟ್ » ಹವಾಮಾನ

ಫರಿದ್ಕೋಟ್ ಹವಾಮಾನ

ಫರೀದ್ಕೋಟ್‍ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಡಿಸೆಂಬರ್ ನಡುವಿನ ಕಾಲವು ಅತ್ಯಂತ ಪ್ರಶಸ್ತವಾಗಿದೆ. ಆಗ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ. ಹೀಗಾಗಿ ಸ್ಥಳ ವೀಕ್ಷಣೆಗೆ ಹಾಗು ಇನ್ನಿತರ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್); ಬೇಸಿಗೆ ಕಾಲವು ಇಲ್ಲಿ ಮಾರ್ಚ್ ನಲ್ಲಿ ಆರಂಭವಾಗಿ ಜೂನ್‍ನಲ್ಲಿ ಕೊನೆಯಾಗುತ್ತದೆ. ಈ ಅವಧಿಯಲ್ಲಿ ಇಲ್ಲಿ ಭಯಾನಕವಾದ ಬಿಸಿಲು ಹಾಗು ಒಣ ಹವೆಯಿರುತ್ತದೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 41° ಯಿಂದ ಕನಿಷ್ಠ 26.5° ನಡುವೆ ಇರುತ್ತದೆ. ಒಮ್ಮೆಮ್ಮೆ ಇಲ್ಲಿನ ಉಷ್ಣಾಂಶವು 47° ಸೆಲ್ಶಿಯಸ್‍ವರೆಗು ಸಹ ಏರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್): ಮಳೆಗಾಲವು ಇಲ್ಲಿ ಜೂನ್ ಮೊದಲ ಭಾಗದಲ್ಲಿ ಅಥವಾ ಕೊನೆಯ ಭಾಗದಲ್ಲಿ ಆರಂಭಗೊಳ್ಳುತ್ತದೆ. ಮಳೆಗಾಲದ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಗಣನೀಯವಾಗಿ ಇಳಿಕೆಯಾಗುತ್ತದೆ. ಇದರಿಂದಾಗಿ ಸ್ವಲ್ಪ ಬೇಸಿಗೆಯ ತಾಪಮಾನದಿಂದ ಮುಕ್ತಿ ಸಿಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ನವೆಂಬರ್ ಕೊನೆಯ ಭಾಗದಲ್ಲಿ ಇಲ್ಲಿ ಚಳಿಗಾಲ ಆರಂಭವಾಗುತ್ತದೆ. ಈ ಅವಧಿಯಲ್ಲಿ ಉಷ್ಣಾಂಶದಲ್ಲಿ ಇದ್ದಕಿದ್ದಂತೆ ಏರು ಪೇರುಗಳು ಸಂಭವಿಸುತ್ತವೆ. ಜನವರಿ ತಿಂಗಳಿನಲ್ಲಿ ಇಲ್ಲಿನ ಉಷ್ಣಾಂಶವು 4.5° ಸೆಲ್ಶಿಯಸ್ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಗರಿಷ್ಠ ಉಷ್ಣಾಂಶವು 20° ಸೆಲ್ಶಿಯಸ್ ಆಗಿರುತ್ತದೆ.