ಗೋಪುರದ ಹೊರಭಾಗದಲ್ಲಿ ಸುಂದರವಾದ ಗಜತಾರಾಸ್(ಆನೆಗಳು) ಮತ್ತು ನರತಾರಾಸ್ (ಮನುಷ್ಯ ವಿಗ್ರಹಗಳು) ಗಳನ್ನು ಕೆತ್ತಲಾಗಿದೆ. ಈ ದೇವಾಲಯವು ದ್ವಾರಕಾಧೀಶ ದೇಗುಲದಿಂದ 2 ಕಿಮೀ ದೂರದಲ್ಲಿದೆ. ಇದು ಶ್ರೀ ಕೃಷ್ಣನ ಮಡದಿಯಾದ ರುಕ್ಮಿಣಿಯ ದೇವಾಲಯ. ಇಲ್ಲಿ ರುಕ್ಮಿಣಿಯು ಮೂಲದೇವಾಲಯದಿಂದ ಹೊರಗುಳಿಯಲು ಒಂದು ಕಾರಣವಿದೆಯಂತೆ: ಒಮ್ಮೆ ಕೃಷ್ಣ ಮತ್ತು ಅವನ ಹೆಂಡತಿ ದೂರ್ವಾಸ ಮುನಿಯನ್ನು ದ್ವಾರಕೆಗೆ ಆಹ್ವಾನಿಸಲು ಹೋದಾಗ ಆತ ತನ್ನ ಪಲ್ಲಕ್ಕಿಯನ್ನು ಹೊತ್ತು ಹೋಗುವಂತೆ ಹೇಳಿದನಂತೆ.
ದಂಪತಿಗಳು ಇದಕ್ಕೆ ಸಂತೋಷದಿಂದ ಒಪ್ಪಿ ಅದೇ ರೀತಿ ನಡೆದು ಕೊಂಡರಂತೆ. ದಾರಿಯಲ್ಲಿ ರುಕ್ಮಿಣಿಗೆ ಬಾಯಾರಿಕೆಯಾಯಿತಂತೆ ಮತ್ತು ಕೃಷ್ಣನು ಭೂಮಿಯನ್ನು ತೋಡಿ ಗಂಗಾ ಜಲವನ್ನು ಹೊರತೆಗೆದನಂತೆ ಆದರೆ ರುಕ್ಮಿಣಿಯು ಮುನಿ ದೂರ್ವಾಸರಿಗೆ ಒಂದು ಹನಿಯನ್ನು ಕೊಡದೆ ಎಲ್ಲವನ್ನೂ ತಾನೇ ಕುಡಿದು ಬಿಟ್ಟಳಂತೆ. ಇದರಿಂದ ಕುಪಿತನಾದ ಮುನಿ ಆಕೆಗೆ ಗಂಡನಿಂದ ದೂರಾಗುವಂತೆ ಶಾಪ ನೀಡಿದನಂತೆ. ಆದ್ದರಿಂದ ಎರಡೂ ದೇವಾಲಯಗಳ ನಡುವೆ ಅಂತರವಿದೆ.


Click it and Unblock the Notifications