ತತ್ಲೊಯಿಯಲ್ಲಿ ಬಿಸಿನೀರಿನ ಬುಗ್ಗೆಯಿದೆ. ಪ್ರಕೃತಿಯ ಮಡಿಲಲ್ಲಿರುವ ಈ ತಾಣವು ಪ್ರವಾಸಿಗರಿಗೆ ವಿಶ್ರಾಂತಿಯನ್ನು ಒದಗಿಸುತ್ತದೆ. ಇಲ್ಲಿನ ಸುಂದರ ವಾತಾವರಣವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಬಿಸಿನೀರಿನ ಬುಗ್ಗೆಯ ನೀರು ಆರೋಗ್ಯಕ್ಕೆ ಉತ್ತಮವಾದದ್ದೆಂದು ಹೇಳಲಾಗಿದೆ. ಇದು ಪ್ರಕೃತಿ ಸೌಂದರ್ಯಪ್ರಿಯರಿಗೆ ತಕ್ಕುದಾದ ಸ್ಥಳ. ಇದು ದುಮ್ಕಾದಿಂದ 15 ಕಿಮೀ ದೂರದಲ್ಲಿದೆ. ರಾಮಗರ್ಹ್ ಬೆಟ್ಟಗಳು ಮತ್ತು ಬುರ್ಬುರಿ ನದಿ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.


Click it and Unblock the Notifications