Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ರಾಸ್ » ಆಕರ್ಷಣೆಗಳು » ದ್ರಾಸ್ ಯುದ್ಧ ಸ್ಮಾರಕ

ದ್ರಾಸ್ ಯುದ್ಧ ಸ್ಮಾರಕ, ದ್ರಾಸ್

1

ಬಿಂಬತ್ ವಾರ್ ಮೆಮೋರಿಯಲ್ ಎಂತಲೂ ಕರೆಯಲಾಗುವ ದ್ರಾಸ್ ಯುದ್ಧ ಸ್ಮಾರಕವು ದ್ರಾಸ್ ಪಟ್ಟಣದ ಪ್ರಮುಖ ಆಕರ್ಷಣೆ. ನಗರದಿಂದ ಐದು ಕಿ.ಮೀ ದೂರವಿರುವ ಈ ಸ್ಮಾರಕವು ಟೈಗರ್ ಹಿಲ್ ಪ್ರದೇಶದಲ್ಲಿದ್ದು, ಕಾರ್ಗಿಲ್ ಕಾಳಗದ ವೀರ ಯೋಧರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಈ ಸ್ಮಾರಕದ ದ್ವಾರದ ಮೇಲೆ ಕೆತ್ತಲಾಗಿರುವ ಹರಿವಂಶರಾಯ್ ಬಚ್ಚನ್ ರವರ ಕವಿತೆಯು ಪ್ರವಾಸಿಗರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಇವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟರಾದ ಅಮಿತಾಭ್ ಬಚ್ಚನ್ ರವರ ತಂದೆ. ಸ್ಮಾರಕದ ಗೋಡೆ ಮೇಲೆ ಯುದ್ಧದಲ್ಲಿ ಮಡಿದ ಯೋಧರ ಹೆಸರುಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರು ಅವುಗಳನ್ನು ಓದಬಹುದಾಗಿದೆ.

ಈ ಸ್ಮಾರಕದ ಪಕ್ಕದಲ್ಲೆ ಇರುವ ಸಂಗ್ರಹಾಲಯಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಈ ಸಂಗ್ರಹಾಲಯವನ್ನು 'ಆಪರೇಷನ್ ವಿಜಯ್' ದ ಸಂಕೇತವಾಗಿ ನಿರ್ಮಿಸಲಾಗಿದೆ. ಇಲ್ಲಿ ಭಾರತೀಯ ಯೋಧರ ಚಿತ್ರಗಳು, ಯುದ್ಧಕ್ಕೆ ಸಂಬಂಧಪಟ್ಟ ದಾಖಲೆಗಳು, ಪಾಕಿಸ್ತಾನಿ ಯುದ್ಧ ಸಲಕರಣೆಗಳು ಮತ್ತು ಕಾರ್ಗಿಲ್ ಯುದ್ಧದಲ್ಲಿ ಸೇನೆಯ ಲಾಂಛನಗಳನ್ನು ಸಂರಕ್ಷಿಸಿಡಲಾಗಿದೆ. 'ಆಪರೇಷನ್ ವಿಜಯ್' ಅಂದರೆ ಹಿಂದಿಯಲ್ಲಿ ಜಯ ಎಂಬರ್ಥ ನೀಡುವ ಈ ಕಾರ್ಯಾಚರಣೆಯನ್ನು ಕಾರ್ಗಿಲ್ ನಿಂದ ಶತ್ರುಗಳನ್ನು ನಿರ್ಮೂಲನಗೊಳಿಸಲು ನಡೆಸಲಾಗಿತ್ತು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed