ಚಾರಣಿಗರ ಅತ್ಯುತ್ತಮ ತಾಣವೆಂದೇ ಹೇಳಬಹುದಾದ ಕಿಶ್ತ್‌ವಾರ್ ಪಟ್ಟಣ, ಕಾಶ್ಮೀರದ ಇತರೆ ಎಲ್ಲಾ ಚಾರಣ ಮಾರ್ಗಗಳ ಮೂಲವೆಂದು ಹೇಳಬಹುದು. 6000 ಮೀಟರ್ ಎತ್ತರದ ನಾಮ್ಟ್‌ಸೆ ಗಿರಿ, 5370 ಮೀಟರ್ ಎತ್ತರದ ಕ್ಯಾಥೆಡ್ರಲ್, 6065 ಮೀಟರ್ ಎತ್ತರದ ಚರ್ಚಾ, 6001 ಮೀಟರ್ ಎತ್ತರದ ಎಲ್ ಹಾಲಂಗ್ ಮತ್ತು 6574 ಮೀಟರ್ ಎತ್ತರದ ಸಿಕಲ್ ಪರ್ವತದ ಸಮೂಹಗಳು ಈ ನಗರಕ್ಕೆ ಸಮೀಪದಲ್ಲಿವೆ. ಪದ್ದಾರ್, ಮರ್ವಾ ಮತ್ತು ಡಚ್ಚನ್‌ನಂತಹ ಕಣ್ಮನ ಸೆಳೆಯುವ ಕಣಿವೆಗಳಿಂದಲೂ ಈ ಪ್ರದೇಶ ಸುಪ್ರಸಿದ್ಧ. ಭಂದರ್‌ಕೋಟೆ ಗುಹೆಯೂ ಈ ಪ್ರದೇಶದ ಜನಪ್ರಿಯ ತಾಣಗಳಲ್ಲೊಂದಾಗಿದ್ದು ಹಿಂದೂಗಳ ಪವಿತ್ರ ಮಚೈಲ್ ಯಾತ್ರೆಗೂ ಈ ತಾಣ ಹೆಸರುವಾಸಿಯಾಗಿದೆ. ಮಚೈಲ್‌ನಲ್ಲಿರುವ ಚಂಡಿ ಮಾತೆ ಮಂದಿರದ ದರ್ಶನದೊಂದಿಗೆ ಕೈಲಾಸ ಯಾತ್ರೆ ಸಮಾಪ್ತಿಯಾಗುವುದು ಎಂಬ ನಂಬಿಕೆ ಭಕ್ತ ಜನರಲ್ಲಿದೆ.


Click it and Unblock the Notifications