ರಿಡ್ಜ್ ಪಾಯಿಂಟ್ನಿಂದ ದಿಗ್ಬೋಯ್ ನಗರದ ಮನಸೂರೆಗೊಳ್ಳುವ ನೋಟವನ್ನು ಕಾಣಬಹುದು. ಇದು ಪಟ್ಟಣಕ್ಕೆ ಸಮೀಪದಲ್ಲಿದೆ. ಇಲ್ಲಿಂದ ನಗರದ ಪಕ್ಷಿನೋಟ ಮಾತ್ರವಲ್ಲದೆ ಹಿಮಾಚ್ಛಾದಿತ ಪೂರ್ವ ಹಿಮಾಲಯ ಶ್ರೇಣಿಗಳನ್ನು ಕಾಣಬಹುದು.
ರಿಡ್ಜ್ ಪಾಯಿಂಟ್ಗೆ ಹೋಗುವ ದಾರಿಯು ಕೂಡ ಮನೋಹರವಾಗಿದೆ. ಪಾಯಿಂಟ್ಗೆ ಹೋಗುವ ದಾರಿಯಲ್ಲಿ ಈ ಪ್ರದೇಶದಲ್ಲಿನ ಬ್ರಿಟೀಷರ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಈ ಪಾಯಿಂಟ್ನಿಂದ ದಿಗ್ಬೊಯ್ ತೈಲ ಸಂಸ್ಕರಣ ಘಟಕ ಮತ್ತು ಯುದ್ಧ ಸಮಾಧಿ ಸ್ಥಳವನ್ನು ಕಾಣಬಹುದು.
ಚಳಿಗಾಲದ ಆರಂಭದ ದಿನಗಳಲ್ಲಿ ಇಲ್ಲಿಂದ ಹಿಮಾಚ್ಛಾದಿತ ಹಿಮಾಲಯವನ್ನು ನೋಡವುದು ಕಣ್ಣಿಗೆ ಹಬ್ಬವೆನಿಸುತ್ತದೆ. ಆದರೂ ಆಕಾಶವು ನಿರ್ಮಲವಾಗಿದ್ದು ಹವಾಮಾನ ಅನುಕೂಲಕರವಾಗಿದ್ದರೆ ಮಾತ್ರ ಹಿಮಾಲಯದ ನೋಟ ಪ್ರವಾಸಿಗರಿಗೆ ಸಿಗಲು ಸಾಧ್ಯ.


Click it and Unblock the Notifications