Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಪಾರ್ಲಿಮೆಂಟ್ ಹೌಸ್ (ಸಂಸತ್ತು)

ಪಾರ್ಲಿಮೆಂಟ್ ಹೌಸ್ (ಸಂಸತ್ತು), ದೆಹಲಿ

9

ದೇಶದ ಸರ್ವೋಚ್ಛ ಕಾನೂನನ್ನು ನಿಯಂತ್ರಿಸುವ ಪಾರ್ಲಿಮೆಂಟ್ ಹೌಸ್ (ಸಂಸತ್ತು) ನವ ದೆಹಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಸಂಸದ್ ಮಾರ್ಗದಲ್ಲಿರುವ ಪಾರ್ಲಿಮೆಂಟ್, ಆಕರ್ಷಕ ವೃತ್ತಾಕಾರದ ರಚನೆಯನ್ನು ಹೊಂದಿದೆ. ಮಂತ್ರಿಗಳ ಕಚೇರಿಗಳು, ವಿವಿಧ ಆಯೋಗಗಳ ಕೊಠಡಿಗಳು ಮತ್ತು ವ್ಯಾಪಕ ಪುಸ್ತಕ ಸಂಗ್ರಹವನ್ನು ಹೊಂದಿದ ಸುಂದರ ಗ್ರಂಥಾಲಯವನ್ನು ಇಲ್ಲಿ ಕಾಣಬಹುದು.

ವೃತ್ತಾಕಾರದ ಕಟ್ಟಡವು ಕೇಂದ್ರ ಹಜಾರವನ್ನು ಹೊಂದಿಕೊಂಡಂತೆ ಗುಮ್ಮಟವನ್ನು ಹೊಂದಿದೆ. ಇದನ್ನು ಸಾಮ್ರಾಜ್ಯದ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದು 144 ಕಂಬಗಳು ಒಂದು ಜಗುಲಿ ಒಳಗೊಂಡಿದೆ. ಇದರ ವಿನ್ಯಾಸವನ್ನು ಸರ್ ಎಡ್ವಿನ್ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಎಂಬ ಎರಡು ಬ್ರಿಟಿಷ್ ವಿನ್ಯಾಸಕಾರರಿಂದ ಮಾಡಲಾಗಿದೆ. ಇದನ್ನು 1927ರಲ್ಲಿ ಪೂರ್ಣಗೊಳಿಸಲಾಯಿತು.

ಈ ಕಟ್ಟಡವು 1946 ರವರೆಗೆ ಕೇಂದ್ರ ಶಾಸನ ಸಭೆ ಮತ್ತು ರಾಜ್ಯಗಳ ಪರಿಷತ್ತಿನ ಕೇಂದ್ರ ಗ್ರಂಥಾಲಯವಾಗಿ ಕಾರ್ಯನಿರ್ವಹಿಸಿತ್ತು. ಮತ್ತು ನಂತರ ಸಂವಿಧಾನ ಅಸೆಂಬ್ಲಿ (ಸಭೆ) ಸಭಾಂಗಣವಾಗಿ ಪರಿವರ್ತಿಸಲಾಯಿತು. ಕೇಂದ್ರ ಸಭಾಂಗಣವು ಕೆಳಗಿನ ಎರಡು ಕಾರಣಗಳಿಗಾಗಿ ಭಾರತೀಯ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ: ನೆಹರು ನೇತೃತ್ವದಲ್ಲಿ 1947 ರಲ್ಲಿ ತಾತ್ಕಾಲಿಕ ಸರ್ಕಾರಕ್ಕೆ ವಸಾಹತು ಅಧಿಕಾರದ ಹಸ್ತಾಂತರ ಮತ್ತು  ಸಂವಿಧಾನವನ್ನು ಪಾರ್ಲಿಮೆಂಟ್ ಕಟ್ಟಡದ ಅದೇ ಕೇಂದ್ರ ಸಭಾಂಗಣದಲ್ಲಿ ರೂಪಿಸಲಾಯಿತು.

ಇಂದು ಕೇಂದ್ರ ಸಭಾಂಗಣವು ಲೋಕಸಭೆ ಮತ್ತು ರಾಜ್ಯಸಭಾ ಸಭೆಗಳ ಚರ್ಚೆಗಳು ಮತ್ತು ಸದಸ್ಯರು ಹಾಗೂ ಇತರ ಪ್ರಮುಖ ರಾಜಕೀಯ ಸಂದರ್ಭಗಳಲ್ಲಿ ನಡೆಯುವ  ಚರ್ಚೆಗಳನ್ನು ನಡೆಸಲು ಬಳಸಲಾಗುತ್ತದೆ.

ಈ ಕಟ್ಟಡದ ಒಳಗೆ ವೀಕ್ಷಣೆಗೆ ಅವಕಾಶವಿಲ್ಲ. ಆದಾಗ್ಯೂ, ಮುಂಚಿತವಾಗಿ ಅನುಮತಿಯನ್ನು ಪಡೆದು ಇಲ್ಲಿನ ಪ್ರಕ್ರಿಯೆಗಳನ್ನು ವೀಕ್ಷಿಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed