Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಹಳೆಯ ಕೋಟೆ

ಹಳೆಯ ಕೋಟೆ, ದೆಹಲಿ

4

ದೆಹಲಿಯ ಹಳೆಯ ಕೋಟೆ ಅಥವಾ ಪುರಾನಾ ಕಿಲಾ ದೆಹಲಿಯ ಪ್ರಸ್ತುತ ಅನೇಕ ಆಸಕ್ತಿದಾಯಕ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ. ದೆಹಲಿಯ ಎಲ್ಲಾ ಹಳೆಯ ಕೋಟೆಗಳಲ್ಲೊಂದಾಗಿರುವ ಈ ಕೋಟೆಯು ಸ್ವತಃ ಮೊದಲಿಗೆ ಗುರುತಿಸಲ್ಪಟ್ಟ ಹಳೆಯ ಕೋಟೆ ಎಂಬ ಖ್ಯಾತಿ ಪಡೆದಿದ್ದು ಇಂದ್ರಪ್ರಸ್ಥ ಎಂದು ಕರೆಯಲ್ಪಡುವ ಒಂದು ಐತಿಹಾಸಿಕ ನಗರದಲ್ಲಿ ನೆಲೆಗೊಂಡಿದೆ.

ಪುರಾಣಗಳ ಪ್ರಕಾರ, ಇದೊಂದು ಅತ್ಯಂತ ಹಳೆಯ ಕೋಟೆಯಾಗಿದ್ದು ಯಮುನಾ ನದಿಯ ದಂಡೆಯ ಮೇಲೆ ಪಾಂಡವರಿಗೆ ದೊರೆತಿತ್ತು. ಇದನ್ನು ಮಹಾಭಾರತ ನಡೆಯುವ ಮೊದಲೇ ನಿರ್ಮಿಸಲಾಗಿದ್ದು, 5,000 ವರ್ಷ ಹಳೆಯದು ಎನ್ನಲಾಗಿದೆ. ಸಂಶೋಧಕರ ಪ್ರಕಾರ, ಹ್ಯಾಮ್ಲೆಟ್ ಹೆಸರಿನ ಇಂದ್ರಪಥ್ ಪುರಾಣ ಕೀಲಾ ಗೋಡೆಗಳ ಒಳಗೆ ಇನ್ನೂ ಅಸ್ತಿತ್ವದಲ್ಲಿದೆ ಎಂದಿದ್ದಾರೆ.  ಇನ್ನೊಂದು ನಂಬುಗೆಯ ಪ್ರಕಾರ ಹುಮಾಯೂನ್ ನ್ ರಾಜಧಾನಿ ದಿನ್ ಪನ್ಃ ಇಲ್ಲಿಯೇ ನೆಲೆಯಾಗಿದ್ದು ನಂತರ ಅಫಘನ್ ನರ ಪ್ರಥಮ ಚಕ್ರವರ್ತಿ ಶೇರ್ ಷಾ ಸೂರಿಯಿಂದ ನವೀಕರಣಗೊಂಡು ಶೇರ್ ಘರ್ ಎಂದು ಕರೆಯಲ್ಪಟ್ಟಿತು. ಇಷ್ಟೇ ಅಲ್ಲದೆ, ಭಾರತದ ಕೊನೆಯ ಹಿಂದೂ ಚಕ್ರವರ್ತಿ ಎಂದು ಕರೆಯಲಾಗುವ, ಹೇಮು ಎಂದೇ ಹೆಸರುವಾಸಿಯಾದ ಹಿಂದೂ ರಾಜ, ಸಾಮ್ರಾಟ್ ಹೇಮ್ ಚಂದ್ರ ವಿಕ್ರಮಾದಿತ್ಯ 1556 ರಲ್ಲಿ ಆಗ್ರಾ ಮತ್ತು ದೆಹಲಿಯ ಯಲ್ಲಿ ಅಕ್ಬರನ ಸೈನ್ಯವನ್ನು ವಶಪಡಿಸಿಕೊಂಡ ನಂತರ ಈ ಕೋಟೆಯಲ್ಲಿ ಕಿರೀಟಧಾರಣೆ ಮಾಡಲಾಯಿತು ಎಂದೂ ಹೇಳಲಾಗುತ್ತದೆ.

ಆದಾಗ್ಯೂ, ಈ ಕೋಟೆಯ ಈ ಪ್ರದೇಶವನ್ನು ಆಳಿದ ಹುಮಾಯೂನ್ ಶೇರ್ ಶಾ ಮತ್ತು ಹೇಮ್ ಚಂದ್ರ ಈ ಮೂರು ಚಕ್ರವರ್ತಿಗಳ ದುರಾದೃಷ್ಟ ಕೋಟೆ ಎಂದು ನಂಬಲಾಗಿದೆ. ಪುರಾನಾ ಕಿಲಾ ಸಂಕೀರ್ಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಆಸಕ್ತಿದಾಯಕ ಸ್ಮಾರಕಗಳು ಇವೆ. ಅವುಗಳಲ್ಲಿ ಕೆಲವು - ಶೇರ್ ಶಾ ನಿರ್ಮಿಸಿದ ಕಿಲಾ-ಐ-ಕುನ್ಹಾ ಮಸೀದಿ, ಎರಡು ಅಂತಸ್ತಿನ ಅಷ್ಟಭುಜಾಕೃತಿಯ ಕೆಂಪು ಮರಳುಗಲ್ಲಿನಿಂದ ಗೋಪುರ - ಶೇರ್ ಮಂಡಲ್, ರಾಜ ಅಕ್ಬರನ ಸಾಕು ತಾಯಿ ಮಹಾಮ್ ಅಂಗ ನಿರ್ಮಿಸಿದ ಖೈರುಲ್ ಮಂಜಿಲ್ ಮಸೀದಿ. ಮತ್ತು ದಕ್ಷಿಣ ದ್ವಾರದ ಶೇರ್ ಘರ್ ಎಂದು ಹೆಸರಿಸಲಾದ ಲಾಲ್ ದರ್ವಾಜಾ ಇನ್ನೂ ಹಲವು.

ಕೋಟೆಯು ದಪ್ಪ ಮತ್ತು ಕಟ್ಟಾ ಗೋಡೆಗಳ ಎರಡೂ ಬದಿಗಳಲ್ಲಿ ಮೂರು ಗೇಟ್ವೇಗಳ ಜೊತೆಗೆ ಕೊತ್ತಲಗಳನ್ನು ಒಳಗೊಂಡಿದೆ. ಈ ಕೋಟೆಯ ಗೋಡೆಗಳು 18 ಮೀಟರ್ ಎತ್ತರವಾಗಿದ್ದು, 1.5 ಕೀ. ಮಿ ಪ್ರದೇಶವನ್ನು ವ್ಯಾಪಿಸಿದೆ. ಜೊತೆಗೆ ಮೂರು ಪ್ರವೇಶ ದ್ವಾರಗಳನ್ನು ಹೊಂದಿದ್ದು, ಪಶ್ಚಿಮದಲ್ಲಿ ಬಾರಾ ದರ್ವಾಜಾ (ದೊಡ್ಡ ಗೇಟ್), ದಕ್ಷಿಣದಲ್ಲಿ ಹುಮಾಯೂನ್ ದ್ವಾರವಿದ್ದು, ಪ್ರಸ್ತುತ ಮೂರನೆಯ ದ್ವಾರ ನಿಶೇಧಿಸಲಾಗಿದ್ದು ತಲಾಕ್ಯೂ/ಕೂ ದ್ವಾರವಾಗಿದೆ. ಈ ಮೂರು ಕೋಟೆಗಳು ಎರಡು ಮಹಡಿಯ ರಚನೆಗಳನ್ನು ಹೊಂದಿದ್ದು ಬದಿಗಳಲ್ಲಿ ಕೊತ್ತಲಗಳ ಗೋಪುರಗಳನ್ನು ಹಾಗೂ ಮೊಗಸಾಲೆ (ಬಾಲ್ಕನಿ), ಕಂಬಗಳು, ಮಂಟಪಗಳನ್ನೂ ಕೂಡಾ ಇಲ್ಲಿ ಕಾಣಬಹುದು. ಇಂದು ಪುರಾನಾ ಕಿಲಾದಲ್ಲಿ, ದೆಹಲಿಯ ಇತಿಹಾಸವನ್ನು ಹೇಳುವಂತಹ ದ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಪ್ರತಿ ದಿನ ಸಂಜೆ ನಡೆಸಲಾಗುತ್ತದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed