Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಜಂತರ್ ಮಂತರ್

ಜಂತರ್ ಮಂತರ್, ದೆಹಲಿ

5

ದೆಹಲಿಯಲ್ಲಿರುವ ಜಂತರ್ ಮಂತರ್ ಇದೊಂದು ಅತ್ಯಂತ ಆಕರ್ಷಣೀಯ ಹಾಗೂ ನೋಡಲೇ ಬೇಕಾದ ಸ್ಥಳವಾಗಿದೆ. ಇಲ್ಲಿ ಹೆಸರುವಾಸಿಯಾದ ವೀಕ್ಷಣಾಲಯವಿದ್ದು ಅದರೊಳಗೆ ಕೆಲವು ಅನನ್ಯ ಖಗೋಳಿಯ ಉಪಕರಣಗಳಿವೆ. ಇವು ಆಧುನಿಕ ದೆಹಲಿಯ ಅಚ್ಚುಮೆಚ್ಚಿನ ಸ್ಥಳವಾಗಿದೆ.

ಜಂತರ್ ಮಂತರ್ ಅನ್ನು1724 ರಲ್ಲಿ ನಿರ್ಮಿಸಲಾಯಿತು. ಹಾಗೂ ಇದನ್ನು ಜೈಪುರದ ಎರಡನೇ ಮಹಾರಾಜ ಜೈ ಸಿಂಗ್ ನಿರ್ಮಿಸಿದ. ಇತರ ಐದು ವಿಶಿಷ್ಟ ಕಟ್ಟಡಗಳ ಪೈಕಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಕ್ಯಾಲೆಂಡರ್ ಹಾಗೂ ಖಗೋಳ ಶಾಸ್ತ್ರೀಯ ಕೋಷ್ಠಕಗಳನ್ನು ಪರಿಶೀಲಿಸಲು ಬಯಸಿದ್ದ ಮಹಾರಾಜ ಮೋಘಲ್ ಸಾಮ್ರಾಟ ಮೊಹಮ್ಮದ್ ಷಾನಿಂದಾಗಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಸೂರ್ಯ, ಚಂದ್ರ, ಗ್ರಹಗಳ ಚಲನೆಯ ಊಹೆ/ಆಧಾರದ ಮೇಲೆ ಇಲ್ಲಿನ ಖಗೋಳ ಶಾಸ್ತ್ರೀಯ ಕೋಷ್ಠಕವನ್ನು ಸಂಕಲನದ ಮೂಲಕ ನಿರ್ಮಿಸುವ ಗುರಿಯನ್ನಿಟ್ಟುಕೊಳ್ಳಲಾಗಿತ್ತು. ಜಂತರ್ ಮಂತರ್ ಒಟ್ಟು 13 ಖಗೋಳ ಶಾಸ್ತ್ರೀಯ ಉಪಕರಣಗಳನ್ನು ಹೊಂದಿದೆ.

ಅದೇ ಹೆಸರಿನಲ್ಲಿ ಅಂದರೆ ಜಂತರ್ ಮಂತರ್ ಎಂಬ ಹೆಸರಿನಲ್ಲಿ ಜೈ ಸಿಂಗ್ ನಿರ್ಮಿಸಿದ ಇತರ ವೀಕ್ಷಣಾಲಯಗಳನ್ನು, ಜೈಪುರ, ವಾರಣಾಸಿ, ಉಜ್ಜಯಿನಿ ಮತ್ತು ಮಥುರಾ ಗಳಲ್ಲಿ ಕಾಣಬಹುದು. ಆದಾಗ್ಯೂ, ಇದುವರೆಗೆ ಯಾವುದೇ ನಿಖರವಾದ ಅವಲೋಕನಗಳನ್ನು ಈ ಉಪಕರಣಗಳ ಬಗ್ಗೆ ಮಾಡಲಾಗಿಲ್ಲ. ಆದರೆ ಈ ಎಲ್ಲಾ ಐದು ವೀಕ್ಷಣಾಲಯಗಳು ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಮತ್ತು ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಅತ್ಯಂತ ಗಮನಾರ್ಹವಾಗಿವೆ.

ಉಪಕರಣಗಳ  ಬಗ್ಗೆ :

ಜಂತರ್ ಮಂತರ್ ನಲ್ಲಿ ಕೆಲವು ವಿಶೇಷವಾದ ಉಪಕರಣಗಳಿವೆ. ರಾಮ್ ಯಂತ್ರ, ಮಿಶ್ರ ಯಂತ್ರ - ಪ್ರಪಂಚದಾದ್ಯಂತ ವಿವಿಧ ಸ್ಥಳಗಳಲ್ಲಿ ಮದ್ಯಾಹ್ನಕ್ಕೆ ತಿರುಗಿದ ಸಮಯವನ್ನು ಸೂಚಿಸಲು ರಚನೆ ಮಾಡಲಾಗಿದೆ. ಸಾಮ್ರಾಟ್ ಯಂತ್ರ - ಇದು 70 ಅಡಿ ಎತ್ತರವಿರುವ, ಸಮಾನ ಸಮಯವನ್ನು ಹೇಳುವ ನೆರಳು ಗಡಿಯಾರ. ಮತ್ತು ಜಯಪ್ರಕಾಶ್ ಯಂತ್ರ - ಇದು ನಕ್ಷತ್ರಗಳ ಸ್ಥಾನವನ್ನು ಹೊಂದಿಸುವ ಗುರಿಯೊಂದಿಗೆ ನಿರ್ಮಿಸಲಾಗಿದೆ.

ಜಂತರ್ ಮಂತರ್, ಪಾರ್ಲಿಮೆಂಟ್ (ಸಂಸತ್ತು) ಸ್ಟ್ರೀಟ್ ಬಳಿ ಇದೆ ಹಾಗೂ ಇದು ಸಾರ್ವಜನಿಕ ಪ್ರದರ್ಶನಕ್ಕಾಗಿ ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun