ಜಗತ್ತಿಗೆ ಭಾರತದ ಕಲೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವುದೇ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ. ದೇಶದ ಕಲಾ ರಸಿಕರ ಪ್ರಯತ್ನದಿಂದಾಗಿ 1952 ರಲ್ಲಿ ಇದನ್ನು ನಿರ್ಮಿಸಲಾಯಿತು. ಜನಪಥ್ ಸಮೀಪದಲ್ಲಿ ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿ ಈ ಎಂಪೋರಿಯಂ ಇದೆ.ದೇಶದ ಎಲ್ಲಾ ಕಡೆಯ ಸಂಸ್ಕೃತಿಯನ್ನೂ ಇಲ್ಲಿನ ಎಂಪೋರಿಯಂನ ಕಲೆಕ್ಷನ್ ಹೊಂದಿದೆ. ಮೂರ್ತಿಗಳು, ಪೇಂಟಿಂಗ್‌ಗಳು, ಕಲಾಕೃತಿಗಳು, ಲೋಹದ ಸಾಮಗ್ರಿಗಳು, ಬಿಡಿ ಭಾಗಗಳು, ಆಭರಣಗಳು, ಕುಶಲ ಸಾಮಗ್ರಿಗಳು, ಪ್ರಸಾದನ ಸಾಮಗ್ರಿಗಳು, ಮರದ ಕೆತ್ತನೆಗಳು, ಮಡಿಕೆ-ಕುಡಿಕೆಗಳು ಮತ್ತು ಕಲ್ಲಿನ ಕೆತ್ತನೆಗಳು... ಹೀಗೆ ಎಲ್ಲಾ ವಿಧದ ಸಾಮಗ್ರಿಗಳೂ ಇಲ್ಲಿ ಲಭ್ಯ.
ಈ ಎಂಪೋರಿಯಂ ಅತ್ಯಂತ ಜನಪ್ರಿಯವಾಗಿದ್ದು ತನ್ನಲ್ಲಿರುವ ಕೈಮಗ್ಗ ಮತ್ತು ಕರಕುಶಲ ಸಾಮಗ್ರಿಗಳಿಂದಾಗಿ. ಈ ಸುಂದರ ಕಲಾಕೃತಿಗಳನ್ನು ತಯಾರಿಸುವ ಲಕ್ಷಗಟ್ಟಲೆ ಕುಟುಂಬಗಳು ಈ ಎಂಪೋರಿಯಂನಿಂದಲೇ ಬದುಕು ಕಟ್ಟಿಕೊಳ್ಳುತ್ತಿವೆ. ಈ ಸಾಮಗ್ರಿಗಳನ್ನು ಉತ್ಪಾದಿಸುವುದರ ಜೊತೆಗೇ ಅವರ ವಿಸ್ತಾರವನ್ನೂ ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ಸೂಕ್ತ ಬೆಲೆಗೆ ರಫ್ತು ಮಾಡುವ ಮೂಲಕ ಅವರು ತಮ್ಮ ದೇಶದ ಹೆಮ್ಮೆಯನ್ನೂ ಹೆಚ್ಚಿಸುತ್ತಿದ್ದಾರೆ. ಹಾಗೆಯೇ ಉಡುಗೊರೆ ಸೇವೆಯನ್ನೂ ಅವರು ನೀಡುತ್ತಿದ್ದಾರೆ.
ಇಲ್ಲಿರುವ ಪ್ರತಿಯೊಂದು ಉತ್ಪನ್ನಕ್ಕೂ ತನ್ನದೇ ಆದ ಗೌರವವಿದೆ. ಇಲ್ಲಿನ ಸಾಮಗ್ರಿಗಳು ಸಾಂಸ್ಕೃತಿಕವಾಗಿ ಶ್ರೀಮಂತವಾದದ್ದು. ನಿಮಗಾಗಿ ಅವರು ವಿಶೇಷವಾಗಿ ಅಲ್ಲೇ ತಯಾರಿಸಿಕೊಡುವ ಚಾಣಾಕ್ಷತೆಯನ್ನೂ ಕಣ್ತುಂಬಿಸಿಕೊಳ್ಳಬಹುದು.
ದೆಹಲಿಯಲ್ಲಿ ಮಾತ್ರ ಈ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಂ ಇರುವುದಲ್ಲ, ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಇವೆ. ಈ ಎಂಪೋರಿಯಂಗೆ ಪ್ರಧಾನಮಂತ್ರಿಗಳು ಮತ್ತು ವಿದೇಶಿ ರಾಯಭಾರಿಗಳೂ ಭೇಟಿ ನೀಡುತ್ತಾರೆ.


Click it and Unblock the Notifications