Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಏರ್‌ಫೋರ್ಸ್ ಮ್ಯೂಸಿಯಂ

ಏರ್‌ಫೋರ್ಸ್ ಮ್ಯೂಸಿಯಂ, ದೆಹಲಿ

2

ದಿಲ್ಲಿಯ ಪಾಲಂ ವಾಯುನೆಲೆಯಲ್ಲಿ ಈ ಏರ್‌ಫೋರ್ಸ್ ಮ್ಯೂಸಿಯಂ ಇದೆ. ದೇಶದಲ್ಲೇ ಇದೊಂದು ಅತ್ಯುತ್ತಮ ಹಾಗೂ ಆಕರ್ಷಕ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆ ಪಡೆದಿದೆ. ದೇಶದ ವಾಯುಯಾನ ವ್ಯವಸ್ಥೆಯಲ್ಲಿ ಸೇನೆ ಹೊಂದಿರುವ ಸಂಗ್ರಹ ಹಾಗೂ ಸಾಧಿಸಿದ ಸಾಧನೆಯ ಸಚಿತ್ರ ವಿವರ ಇಲ್ಲಿದೆ. ಇದು ಭಾರತೀಯ ವಾಯು ಸೇನೆಯ (ಐಎಎಫ್‌) ವಿವರ ನೀಡುವುದು ಮಾತ್ರವಲ್ಲ ವಾಯುಸೇನೆಯ ಸಮಗ್ರ ಇತಿಹಾಸವನ್ನು ತಿಳಿಸುವ ಕಾರ್ಯ ಮಾಡುತ್ತಿದೆ.  ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ, ಹೋರಾಡಿದ ಮಹಾನ್‌ ವ್ಯಕ್ತಿಗಳ ಮಾಹಿತಿ ಇಲ್ಲಿ ಸುಲಭವಾಗಿ ಸಿಗುತ್ತದೆ. ಈ ಮ್ಯೂಸಿಯಂ ಒಳಾಂಗಣ ಹಾಗೂ ಹೊರಾಂಗಣ ಗ್ಯಾಲರಿಗಳನ್ನು ಒಳಗೊಂಡಿದ್ದು, ಪ್ರತ್ಯೇಕ ಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಸಾಕಷ್ಟು ವಿಧದ ಸಂಗ್ರಹವನ್ನು ಇಲ್ಲಿ ಕಣ್ಮುಂದೆ ತರುವ ಪ್ರಯತ್ನ ಆಗಿದೆ. ಒಳಾಂಗಣ ಗ್ಯಾಲರಿಯ ಚಿತ್ರಣದ ಮೂಲಕ ನೋಡುವ ಕಾರ್ಯ ಆರಂಭಿಸಿದರೆ ಅದು ಉತ್ತಮ.

ಒಳಾಂಗಣ ಗ್ಯಾಲರಿ ಚಿತ್ರಣ: ಭಾರತೀಯ ವಾಯು ಸೇನೆಯಲ್ಲಿ ಬಳಸುವ ಅಪರೂಪದ ಆಯುಧಗಳನ್ನು ಒಳಾಂಗಣ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ಇದಲ್ಲದೇ ಇಲ್ಲಿ ಸೇನೆಯ ಸಮವಸ್ತ್ರ, ಛಾಯಾಚಿತ್ರ ಹಾಗೂ ಇತರೆ ಸಂಗ್ರಹಗಳೂ ಗಮನ ಸೆಳೆಯುತ್ತವೆ. 1932 ರಿಂದಲೂ ಸಂಗ್ರಹಿಸಿದ ವಸ್ತುಗಳು ಇಲ್ಲಿವೆ. ಅಂದು ಆಗತಾನೆ ವಾಯುಸೇನೆಯ ವಿಶೇಷ ಬೆಳವಣಿಗೆಗಳು ಆರಂಭವಾಗಿದ್ದವು. ಇಲ್ಲಿರುವ ಅಪರೂಪದ ಸಂಗ್ರಹಗಳಲ್ಲಿ ಅನೇಕ ಮಾಹಿತಿಗಳು ಲಭ್ಯವಾಗುತ್ತವೆ. ಅವುಗಳಲ್ಲಿ ಒಂದು 1971ರಲ್ಲಿ ಭಾರತ-ಪಾಕ್‌ ಯುದ್ಧದ ನಂತರ ಪಾಕ್‌ನ ಮಿಲಿಟರಿ ಜನರಲ್‌ ನಿಯಾಜಿ ಅವರು ಕೆಲ ದಾಖಲೆಪತ್ರಗಳನ್ನು ನೀಡುತ್ತಿರುವ ಛಾಯಾಚಿತ್ರ. ಇದು ಅತ್ಯಂತ ಅಪರೂಪದ ಸಂಗ್ರಹವಾಗಿದೆ. ಅಲ್ಲದೇ ಯುದ್ಧವಿಮಾನಗಳು ಎದುರಾಳಿ ವಿಮಾನಗಳನ್ನು ದ್ವಂಸ ಮಾಡುವ, ದಾಳಿ ನಡೆಸುವ ಚಿತ್ರಗಳು ಆಕರ್ಷಕವಾಗಿ ಸಂಗ್ರಹಿತವಾಗಿವೆ.

ಈ ಸಂಗ್ರಹಗಳು ನಿಮ್ಮನ್ನು ಅಪಾರವಾಗಿ ಸೆಳೆಯುತ್ತವೆ. ಅಲ್ಲದೇ ದೇಶದ ಮೇಲಿನ ಅಭಿಮಾನವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೇ ಇಲ್ಲಿ 15 ವಿಧದ ಯುದ್ಧ ವಿಮಾನಗಳು ಹಾಗೂ ಕೆಲ ಮಿಲಿಟರಿ ವಾಹನಗಳ ನಮೂನೆಯನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಸಾಧನಗಳು ಹಾಗೂ ವಾಯುನೆಲೆಯಲ್ಲಿ ಬಳಕೆಯಾಗುವ ಗನ್‌ಗಳನ್ನು ಪ್ರದರ್ಶಿಸಲಾಗಿದೆ.

ಹೊರಾಂಗಣ ಗ್ಯಾಲರಿ ಚಿತ್ರಣ: ಹೊರಾಂಗಣ ಗ್ಯಾಲರಿಯು ಕೆಲವೊಂದು ಕುತೂಹಲಕಾರಿ ಅಂಶವನ್ನು ಒಳಗೊಂಡಿದೆ. ಅಪರೂಪದ ಹಾಗೂ ಕುತೂಹಲಕಾರಿ ಆಯುಧಗಳು, ವೈರಿಗಳಿಂದ ಗೆದ್ದ ಯುದ್ಧ ವಾಹನಗಳು, ಯುದ್ಧ ಸಂಬಂಧಿ ಪ್ರಶಸ್ತಿ ಫಲಕಗಳು ಸೇರಿದಂತೆ ಹಲವು ವಿಷಯ ಹಾಗೂ ವಸ್ತುಗಳು ಇಲ್ಲಿವೆ.

ಇದೆಲ್ಲದರ ಹೊರತಾಗಿ ಇಲ್ಲಿ ಬಂದಾಗ ನೋಡಗರನ್ನು ನಿರ್ಮಲ್‌ಜಿತ್‌ ಸಿಂಗ್‌ ಸೇಖೊನ್‌ರ ಮೂರ್ತಿ ಗಮನ ಸೆಳೆಯುತ್ತದೆ. ಇವರು ಭಾರತೀಯ ವಾಯುಸೇನೆಯ ಪ್ಲೈಯಿಂಗ್‌ ಅಧಿಕಾರಿಯಾಗಿದ್ದರು. ಅಲ್ಲದೇ ಭಾರತೀಯ ವಾಯು ಸೇನೆಯಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಕೂಡ ಹೊಂದಿದ್ದಾರೆ. ಇವರು ಹೊಂದಿರುವ ಅತ್ಯುತ್ತಮ ಹಾಗೂ ಆಕರ್ಷಕ ವಿಮಾನ ಹಾರಾಟ ಶೈಲಿ ಹಾಗೂ ಹೋರಾಟ ಮನೋಭಾವವು ಇವರನ್ನು ಒಬ್ಬ ಮಹಾನ್‌ ವ್ಯಕ್ತಿಯನ್ನಾಗಿ ರೂಪಿಸಿದೆ. ಇವರು ವೈರಿಪಡೆಯ ಮೇಲೆ ದಾಳಿ ನಡೆಸುತ್ತಿರುವ ಹಾಗೂ ಇಬ್ಬರನ್ನು ಸಾಯಿಸುತ್ತಿರುವ ಚಿತ್ರ ಇಲ್ಲಿ ಪ್ರದರ್ಶಿತವಾಗಿದೆ. ಮಿಲಿಟರಿ ಅಧಿಕಾರಿಗಳು ಅದರಲ್ಲೂ ವಾಯುಯಾನದಲ್ಲಿ ಸಾಧನೆ ಮಾಡಿದ ಅಧಿಕಾರಿಗಳ ಸಮವಸ್ತ್ರ, ಆಯುಧಗಳು, ತರಹೇವಾರಿ ಮಾದರಿಯ ಟ್ಯಾಂಕರ್‌ಗಳು, ರೈಫಲ್ಸ್‌ಗಳು, ಪಿಸ್ತೂಲುಗಳು, ಗನ್‌ ಹಾಗೂ ರಿವಾಲ್ವರ್‌ಗಳು, ಇಲ್ಲಿನ ಮ್ಯೂಸಿಯಂನ ಆಕರ್ಷಣೆಗಳಾಗಿವೆ.

ಸಮಯ

ಈ ಮ್ಯೂಸಿಯಂ ಸಾರ್ವಜನಿಕ ವೀಕ್ಷಣೆಗೆ ಬುಧವಾರದಿಂದ ಭಾನುವಾರದವರೆಗೆ ತೆರೆದಿರುತ್ತದೆ. ಬೆಳಗ್ಗೆ 10 ರಿಂದ ಸಂಜೆ 5ರ ನಡುವೆ ಜನರು ಪ್ರವೇಶಾವಕಾಶ ಪಡೆಯಬಹುದು. ಸೋಮವಾರ, ಮಂಗಳವಾರ ಹಾಗೂ ಎಲ್ಲಾ ಸಾಮಾನ್ಯ ರಜೆ ದಿನ ಇದು ಮುಚ್ಚಿರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri