ಸಿಲ್ವರ್ ಬೀಚ್ ನ್ನು ತಮಿಳುನಾಡು ರಾಜ್ಯದ ಎರಡನೆ ಅತಿ ಉದ್ದದ ಕಡಲತೀರ ಮತ್ತು ಏಷ್ಯಾದಲ್ಲಿಯೇ ಅತಿ ಉದ್ದದ ಬೀಚ್ ಎಂದು ಕರೆಯಲಾಗುತ್ತದೆ. ನಗರದ ಪೂರ್ವ ಭಾಗದಲ್ಲಿ ನೆಲೆಸಿರುವಸಿಲ್ವರ್ ಬೀಚ್ ಕಡಲೂರಿನ ಅತ್ಯಂತ ಜನಪ್ರಿಯ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ. ಕಡಲತೀರದಲ್ಲಿ ಪ್ರವಾಸಿಗರಿಗೆ ವಿಶ್ರಾಂತಿಯನ್ನು ನೀಡುವಂತಹ ಬೋಟಿಂಗ್ ಮತ್ತು ಕುದುರೆ ಸವಾರಿ ಮೊದಲಾದ ಬಿಡುವಿನ ಚಟುವಟಿಕೆಗಳನ್ನು ಒದಗಿಸಲಾಗುತ್ತದೆ.ಸಣ್ಣ ವಿಹಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಬೀಚ್ ನಲ್ಲಿ ದೋಣಿ ಮನೆ ಮತ್ತು ಮಕ್ಕಳ ಪಾರ್ಕ್ ಕೂಡ ಇದೆ.


Click it and Unblock the Notifications