ಡಚ್ ಫೋರ್ಟ್ ಕೋವಲಂನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಇತಿಹಾಸಪ್ರೇಮಿಗಳಿಗೆ ಆಸಕ್ತಿಯನ್ನು ಹುಟ್ಟಿಸುತ್ತದೆ. ಇದು ಕರಾವಳಿಯ ಪ್ರದೇಶದಲ್ಲಿದ್ದು ಡಚ್ ಈಸ್ಟ್ ಇಂಡಿಯಾ ಕಂಪನಿಯ ವಸಾಹತು ರಕ್ಷಣಾ ಕಾರ್ಯತಂತ್ರ ಬಿಂದುವಾಗಿರಲೆಂದು ನಿರ್ಮಿಸಿದರು. ಈ ಐತಿಹಾಸಿಕ ಸ್ಮಾರಕವನ್ನು ಡಚ್ಚರು ನಿರ್ಮಿಸಿದರೂ ಸಹ ಅವರು ಕೋವಲಮ್ಮನ್ನು ಬಿಟ್ಟಮೇಲೆ ಇದು ವಿವಿಧ ಸಂಸ್ಥೆಗಳ ಸ್ವಾಧೀನದಲ್ಲಿತ್ತು. ಆ ವೈಭವದ ದಿನಗಳು ಹಳೆಯದಾದರೂ ಕೂಡ ಇಂದೂ ಸಹ ಪ್ರತಿವರ್ಷವೂ ಕೋವಲಂ ಸಾವಿರಾರು ಪ್ರವಾಸಿಗಳನ್ನು ಹಿಂದಿನ ಕಾಲದ ಹೆಮ್ಮೆಯ ನೆನಪುಗಳಿಂದ ಆಕರ್ಷಿಸುತ್ತಿದೆ. ಕೋಟೆಯ ಸನಿಹದಲ್ಲಿ ಕಡಲತೀರದ ಕುಠೀರಗಳು, ವಿಹಾರ ಗೃಹಗಳು ಮತ್ತು ಇತರ ಆಕರ್ಷಣೆಗಳು ಸಮುದಾಯಕ್ಕೆ ಬಹಳಷ್ಟು ಆದಾಯವನ್ನು ತರುತ್ತಿದೆ. ಕೋಟೆಯನ್ನು ರಸ್ತೆಯ ಮೂಲಕ ಸುಲಭವಾಗಿ ಸೇರಬಹುದು ಮತ್ತು ಒಮ್ಮೆ ಕೋವಲಂಗೆ ಬಂದರೆ ಡಚ್ ಕೋಟೆಯನ್ನು ಸೇರಲು ಕಷ್ಟಪಡಬೇಕಾಗಿಲ್ಲ.


Click it and Unblock the Notifications