ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ರಾಜಾ ಸೀಟ್ ಒಂದು ಅತ್ಯುತ್ತಮ ಪ್ರವಾಸಿ ತಾಣ. ಇದು ನಿರ್ದಿಷ್ಟಾವಧಿಯಲ್ಲಿ ಹೂಬಿಡುವ ಹೂಗಳ ಮತ್ತು ಸುಂದರವಾದ ಕಾರಂಜಿಗಳ ಒಂದು ಸುಂದರ ಉದ್ಯಾನವನ. ಈ ಕಾರಂಜಿಗಳು ಸಂಗೀತಮಯವಾಗಿದ್ದು, ಬಣ್ಣ ಬಣ್ಣದ ನೀರನ್ನು ಸಂಗೀತದ ಲಯಕ್ಕೆ ತಕ್ಕಂತೆ ಹಾರಿಸಲಾಗುತ್ತದೆ. ಹಾಗೆಯೇ ಉದ್ಯಾನವನಕ್ಕೆ ಕೊಡಗಿನ ರಾಜರ ನೆನಪಿಗಾಗಿ ಈ ಹೆಸರಿಡಲಾಗಿದೆ. ರಾಜಾ ಸೀಟ್‌ನಲ್ಲಿ ಸಣ್ಣದಾದ ಪೆವಿಲಿಯನ್ ಇದ್ದು ಇದನ್ನು ಕಲ್ಲು ಮತ್ತು ಗಾರೆಯಿಂದ ಮಾಡಲಾಗಿದೆ.
ನಾಲ್ಕು ಕಂಬಗಳನ್ನು ಬೆಂಬಲಕ್ಕೆ ನಿರ್ಮಿಸಿ ಕಮಾನನ್ನೂ ಕೂಡಾ ನಿರ್ಮಿಸಲಾಗಿದೆ. ಕೊಡಗು ರಾಜರ ನೆನಪನ್ನು ಈ ನಿರ್ಮಾಣವು ಮಾಡುತ್ತದೆ. ಕೊಡಗು ರಾಜರು ತಮ್ಮ ರಾಣಿಯರ ಜೊತೆ ಈ ಉದ್ಯಾನದಲ್ಲಿ ಸಮಯ ಕಳೆಯುತ್ತಿದ್ದರು. ಸುಂದರ ಹಸಿರು ವಾತಾವರಣ ಮತ್ತು ಸಣ್ಣ ಹಾಗೂ ದೊಡ್ಡ ದೊಡ್ಡ ಪರ್ವತಗಳು ಮಂಜಿನಿಂದ ಕವಿದಿದ್ದು, ಈ ಪ್ರದೇಶವು ಕೊಡಗು ರಾಜರ ಸೌಂದರ್ಯ ಪ್ರಜ್ಞೆಯನ್ನು ನೆನಪಿಸುತ್ತದೆ. ಸುತ್ತಲಿನ ಬಂಡೆ ಮತ್ತು ಪರ್ವತಗಳಿಗಿಂತ ಎತ್ತರದಲ್ಲಿ ನಿರ್ಮಾಣ ಮಾಡಲಾಗಿರುವುದರಿಂದಾಗಿ ರಾಜಾ ಸೀಟ್‌ನಲ್ಲಿ ಕೂತು ಸುತ್ತಲಿನ ಪರಿಸರವನ್ನು ನೋಡಿ ಆನಂದಿಸಬಹುದು. ಇಡೀ ಕಣಿವೆಗೆ ಬಂಗಾರದ ಕಿರಣಗಳನ್ನು ಹೊಮ್ಮಿಸುವ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದು ಅದ್ಭುತ ಅನುಭವ. ಇಲ್ಲಿ ಮಕ್ಕಳು ಆಟ ಆಡುವುದಕ್ಕೆ ಕೂಡಾ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications