ಧರ್ಮಶಾಲಾದ ನಂತರ ಭಾರತದಲ್ಲಿ ಎರಡನೇ ಟಿಬೆಟಿಯನ್ ತಾಣ ಬೈಲಕುಪ್ಪೆ. ಕುಶಾಲನಗರದಿಂದ ಇದು ಕೇವಲ 6 ಕಿ.ಮೀ ದೂರದಲ್ಲಿದೆ. ಇಲ್ಲಿ ಎರಡು ಟಿಬೆಟಿಯನ್ ಶಿಬಿರವಿದ್ದು ಲುಗ್ಸುಮ್ ಸಾಮ್‌ಡುಪ್ಲಿಂಗ್ ಮತ್ತು ಡಿಕ್ಯಿ ಲಾರ್ಸೋಯಿ ಎಂದು ಕರೆಯಲಾಗಿದೆ. ಇಲ್ಲಿ ಸಾವಿರಾರು ಟಿಬೆಟಿಯನ್ನರು ವಾಸಿಸುತ್ತಾರೆ. ಟಿಬೆಟ್ಟನ್ನು ಚೀನೀಯರು ಆಕ್ರಮಿಸಿಕೊಂಡ ನಂತರದಲ್ಲಿ ಟಿಬೆಟಿಯನ್ ಯೋಧರು ಈ ಪ್ರದೇಶಗಳಿಗೆ ಓಡಿಬಂದಿದ್ದಾರೆ. ಇಲ್ಲಿ ಕೃಷಿ ಭೂಮಿಗಳು, ಟಿಬೆಟಿಯನ್ ನಿವಾಸಗಳು, ಪ್ರವಾಸಿಗಳ ಪ್ರಧಾನವಾದ ಟಿಬೆಟ್ ಆಹಾರ ಪದಾರ್ಥಗಳು ಮತ್ತು ಕರಕುಶಲ ಅಂಗಡಿಗಳು ಇಲ್ಲಿದೆ. ಬೈಲಕುಪ್ಪೆಯಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಗೋಲ್ಡನ್ ಟೆಂಪಲ್ ಅಥವಾ ನಾಮ್‌ಡ್ರೋಲಿಂಗ್ ಮಾನಸ್ಟರಿ. ಇದು ಪಕ್ಕಾ ಟಿಬೆಟಿಯನ್ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದ್ದು ದಕ್ಷಿಣ ಭಾರತದಲ್ಲೇ ವಿಶಿಷ್ಟವಾದದ್ದಾಗಿದೆ. ಚಿನ್ನದ ಬಣ್ಣದ 40 ಅಡಿ ಎತ್ತರದ ಪದ್ಮಸಂಭವ, ಬುದ್ಧ ಮತ್ತು ಅಮಿತಾಯಸ್ ಮೂರ್ತಿಯು ವೈಭವದಿಂದ ಅಲಂಕೃತಗೊಂಡಿದೆ. ಪ್ರಾರ್ಥನಾ ಡ್ರಮ್‌ಗಳು, ಪ್ರಾರ್ಥನಾ ಚಕ್ರಗಳು ಮತ್ತು ಬಾಗಿಲುಗಳ ಸುಂದರವಾದ ಕೆತ್ತನೆಯನ್ನು ಹೊಂದಿವೆ. ದೇವಸ್ಥಾನದ ಗೋಡೆಯು ತಂಗ್ಕಾ ಪೇಂಟಿಂಗ್‌ನಿಂದ ಅಲಂಕೃತಗೊಂಡಿದೆ. ಈ ಪೇಂಟಿಂಗ್‌ಗಳು ಬುದ್ಧ ಮತ್ತು ವಜ್ರಯಾನ ಬುದ್ಧಿಸಂನ ಎಲ್ಲಾ ವಂಶಸ್ಥರನ್ನೂ ಕೂಡಾ ಹೊಂದಿದೆ. ಧಾರ್ಮಿಕ ಶಿಕ್ಷಣದ ಸಂಸ್ಥೆಯಾಗಿರುವ ಸೆರಾ, ಸಣ್ಣದಾದ ತಶಿಲುಂಪೋ ನಿವಾಸ, ಸೆರಾ ಮೆಯ್ ಮತ್ತು ಸೆರಾ ಜಯ್ ನಿವಾಸಗಳು ಮತ್ತು ಇತರ ಬುದ್ಧ ವಿಶ್ವವಿದ್ಯಾಲಯಗಳು ಬುದ್ಧ ತತ್ವದ ಬಗ್ಗೆ ಶಿಕ್ಷಣವನ್ನು ನೀಡುತ್ತವೆ.


Click it and Unblock the Notifications