ಮೀರಾ ದೇವಸ್ಥಾನವು ಮೀರಾ ಬಾಯಿಗೆ ಅರ್ಪಿತವಾದ ದೇವಸ್ಥಾನ. ಈಕೆ ರಜಪೂತ ರಾಣಿಯಾಗಿದ್ದಳು. ತನ್ನೆಲ್ಲಾ ರಾಜ ಐಶ್ವರ್ಯವನ್ನು ತ್ಯಜಿಸಿ ಕೃಷ್ಣನ ಆರಾಧನೆಯಲ್ಲಿ ತೊಡಗಿದಳು. ಮೀರಾ ಬಾಯಿಯು ಭಜನೆ ಮತ್ತು ಹಾಡುಗಳನ್ನು ಹಾಡುವ ಮೂಲಕ ಕೃಷ್ಣನನ್ನು ತಪಿಸಿದಳು.ಮೀರಾ ದೇವಸ್ಥಾನವು ರಜಪೂತ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆ. ಇದು ಕುಂಭ ಶ್ಯಾಮ ದೇವಸ್ಥಾನಕ್ಕೆ ಸಮೀಪದಲ್ಲಿದೆ. ಉತ್ತರ ಭಾರತೀಯ ಶೈಲಿಯನ್ನು ಈ ದೇವಸ್ಥಾನ ನಿರ್ಮಾಣಕ್ಕೆ ಅಳವಡಿಸಿಕೊಳ್ಳಲಾಗಿದೆ. ದೇವಸ್ಥಾನದ ಗ್ಯಾಲರಿಯ ಸುತ್ತ ನಾಲ್ಕು ವರಾಂಡವನ್ನು ಹೊಂದಿದೆ. ಮೀರಾ ಮತ್ತು ಕೃಷ್ಣನ ಅನೇಕ ಚಿತ್ರಣಗಳನ್ನು ಈ ದೇವಸ್ಥಾನದಲ್ಲಿ ಮಾಡಲಾಗಿದೆ.


Click it and Unblock the Notifications